×
Ad

ಭಾರತ ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು

Update: 2018-08-22 17:27 IST

ಜಕಾರ್ತ, ಆ.22: ಭಾರತದ ಪುರುಷರ ಹಾಕಿ ತಂಡ ಏಶ್ಯನ್ ಗೇಮ್ಸ್‌ನಲ್ಲಿ ಹಾಂಕಾಂಗ್ ವಿರುದ್ಧ ನಡೆದ ಏಕಪಕ್ಷೀಯ ಬಿ ಗುಂಪಿನ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.

ಹಾಂಕಾಂಗ್ ತಂಡವನ್ನು 26-0 ಗೋಲುಗಳಿಂದ ಹೀನಾಯವಾಗಿ ಸೋಲಿಸಿದ ಭಾರತ 86 ವರ್ಷಗಳ ಬಳಿಕ ಇಷ್ಟು ದೊಡ್ಡ ಅಂತರದ ಜಯ ಸಾಧಿಸಿದೆ. 86 ವರ್ಷಗಳ ಹಿಂದೆ ಯುಎಸ್‌ಎ ವಿರುದ್ಧ ಒಲಿಂಪಿಕ್ಸ್ ವಿರುದ್ಧ 24-1 ಅಂತರದ ಜಯ ಸಾಧಿಸಿತ್ತು. ನ್ಯೂಝಿಲೆಂಡ್ ದೊಡ್ಡ ಅಂತರದ ಗೆಲುವಿನ ದಾಖಲೆ ಹೊಂದಿದೆ. 1994ರಲ್ಲಿ ಸಮೊಯಾ ವಿರುದ್ಧ 36-1 ಅಂತರದಿಂದ ಜಯ ಸಾಧಿಸಿದೆ.

ಭಾರತ ತಂಡ ಹಾಂಕಾಂಗ್ ವಿರುದ್ಧ ಪ್ರಾಕ್ಟೀಸ್ ಪಂದ್ಯದಂತೆ ಆಡಿತು. ಪಂದ್ಯ ಆರಂಭವಾಗಿ ಮೂರನೇ ನಿಮಿಷದಲ್ಲಿ ಗೋಲು ಬಾರಿಸಲು ಆರಂಭಿಸಿತು. ರೂಪಿಂದರ್ ಪಾಲ್ ಸಿಂಗ್ ಭಾರತದ ಗೋಲಿನ ಸುರಿಮಳೆಗೆ ಚಾಲನೆ ನೀಡಿದರು. ಹರ್ಮನ್‌ಪ್ರೀತ್ ಸಿಂಗ್ ಹಾಗೂ ಆಕಾಶ್‌ದೀಪ್ ಸಿಂಗ್ ತಲಾ ಒಂದು ಹ್ಯಾಟ್ರಿಕ್ ಗೋಲು ಬಾರಿಸಿದರು. ಮನ್‌ಪ್ರೀತ್ ಸಿಂಗ್, ಲಲಿತ್ ಉಪಾಧ್ಯಾಯ, ವರುಣ್ ಕುಮಾರ್, ಎಸ್‌ವಿ ಸುನೀಲ್, ವಿವೇಕ್ ಸಾಗರ್, ಮನ್‌ದೀಪ್ ಸಿಂಗ್, ಅಮಿತ್ ರೋಹಿದಾಸ್, ದಿಲ್‌ಪ್ರೀತ್ ಸಿಂಗ್, ಚಿಂಗ್ಲೆಸನಾ ಸಿಂಗ್, ಸಿಮ್ರಾನ್‌ಜೀತ್ ಸಿಂಗ್ ಹಾಗೂ ಸುರೇಂದರ್ ಕುಮಾರ್ ಭಾರತದ ಐತಿಹಾಸಿಕ ಗೆಲುವಿನಲ್ಲಿ ಗೋಲು ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News