×
Ad

ಯುಎಇ ರಾಷ್ಟ್ರ ನಿರ್ಮಾಣದಲ್ಲಿ ಕೇರಳಿಗರ ಕೊಡುಗೆ ಅಪಾರ: ಪಿಣರಾಯಿ ವಿಜಯನ್

Update: 2018-08-22 18:30 IST

ಹೊಸದಿಲ್ಲಿ, ಆ.22: ಕೇರಳದ ಪುನರ್ವಸತಿ ಕಾರ್ಯಕ್ಕಾಗಿ ಯುಎಇ ರಾಷ್ಟ್ರ ನೀಡಿದ್ದ 700 ಕೋ.ರೂ.ನೆರವನ್ನು ಸ್ವೀಕರಿಸಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್,‘’ಯುಎಇಯನ್ನು ಇತರ ರಾಷ್ಟ್ರಗಳಂತೆ ಪರಿಗಣಿಸಬಾರದು. ಆ ದೇಶದ ನಿರ್ಮಾಣದಲ್ಲಿ ಭಾರತೀಯರು ಅದರಲ್ಲೂ ಮುಖ್ಯವಾಗಿ ಕೇರಳಿಗರ ಕಾಣಿಕೆ ಅಪಾರವಿದೆ’’ಎಂದು ಹೇಳಿದ್ದಾರೆ.

''ನನಗೆ ಗೊತ್ತಿರುವಂತೆ, ಯುಎಇ ತನ್ನದೇ ನೆರವನ್ನು ಪ್ರಸ್ತಾವಿಸಿದೆ. ಯುಎಇಯನ್ನು ಇತರ ದೇಶವೆಂದು ಪರಿಗಣಿಸಬಾರದು. ಯುಎಇ ಅಭಿವೃದ್ಧಿಯಲ್ಲಿ ಕೇರಳದವರ ಕೊಡುಗೆ ಅಧಿಕವಿದೆ. ಈ ವಿಚಾರದಲ್ಲಿ ರಾಜಕೀಯ ಬೆರೆಸಲು ಇಷ್ಟಪಡುವುದಿಲ್ಲ. ಅಧ್ಯಯನ ನಡೆಸಿ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವೆ’’ಎಂದು ವಿಜಯನ್ ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.

ಕೇಂದ್ರ ಸರಕಾರ 2004ರ ಡಿಸೆಂಬರ್‌ನಲ್ಲಿ ಜಾರಿಗೆ ತಂದಿರುವ ವಿಪತ್ತು ನೆರವು ನೀತಿಗೆ ಬದ್ಧವಾಗಿದ್ದು, ಕಳೆದ 14 ವರ್ಷಗಳಿಂದ ವಿದೇಶಿ ರಾಷ್ಟ್ರದ ನೆರವನ್ನು ತಿರಸ್ಕರಿಸುತ್ತಾ ಬಂದಿದೆ ಎಂದು ಮೂಲಗಳು ತಿಳಿಸಿವೆ.

‘‘ಕೇಂದ್ರ ಸರಕಾರ ಕೇರಳಕ್ಕೆ ನೀಡಿರುವ ಆರ್ಥಿಕ ಪ್ಯಾಕೇಜ್ ನಮ್ಮ ಬೇಡಿಕೆಗಿಂತ ತುಂಬಾ ಕಡಿಮೆಯಾಗಿದೆ. ಹಾಗಾಗಿ ಇತರರು ನೀಡುವ ಆರ್ಥಿಕ ನೆರವನ್ನು ನಿರಾಕರಿಸುವುದು ಸರಿಯಲ್ಲ’’ಎಂದು ಕೇರಳದ ವಿತ್ತ ಸಚಿವ ಥಾಮಸ್  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News