ಹಿಂದೂ ಕುಟುಂಬಗಳಿಗೆ ಆಶ್ರಯದ ಜೊತೆ ಮನೆಗೆ ಹಿಂದಿರುಗುವಾಗ ಅಕ್ಕಿ, ಧಾನ್ಯ ನೀಡಿದ ಮಸೀದಿ

Update: 2018-08-23 10:14 GMT

#ಜನರನ್ನು ಒಂದಾಗಿಸಿದ ಕೇರಳ ಪ್ರವಾಹ

ತಿರುವನಂತಪುರಂ, ಆ.23: ಕೇರಳ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಹಲವು ಹಿಂದೂಗಳಿಗೆ ಮಲಪ್ಪುರಂ ಜಿಲ್ಲೆಯಲ್ಲಿರುವ ಮಸೀದಿಯೊಂದು ಆಶ್ರಯ ನೀಡಿದೆ. ಪ್ರವಾಹದಿಂದ ಹಾನಿಗೀಡಾಗಿರುವ 2 ಹಿಂದೂ ದೇವಾಲಯಗಳನ್ನು ಮುಸ್ಲಿಮ್ ಯುವಕರು ಶುಚಿಗೊಳಿಸಿದ್ದಾರೆ.

ಆಗಸ್ಟ್ 8ರಿಂದ ಕೇರಳದಲ್ಲಿ ಭಾರೀ ಪ್ರವಾಹವುಂಟಾದ ನಂತರ ಚಾಲಿಯಾರ್ ಗ್ರಾಮದಲ್ಲಿರುವ ಅಕಂಪಡಂ ಜುಮಾ ಮಸೀದಿ ನಿರಾಶ್ರಿತ ಶಿಬಿರವಾಗಿ ಬದಲಾಗಿದೆ. ಮಹಿಳೆಯರು, ಮಕ್ಕಳು ಹಾಗು ಹಿರಿಯ ವಯಸ್ಕರನ್ನೊಳಗೊಂಡ 17 ಹಿಂದೂ ಕುಟುಂಬಗಳಿಗೆ ಮಸೀದಿಯೊಳಗಡೆ ಮಲಗಲು ಅವಕಾಶ ಕಲ್ಪಿಸಲಾಗಿದೆ. ಕ್ಯಾಂಟೀನ್ ನಲ್ಲೇ ಆಹಾರ ತಯಾರಿಸಿ ನಿರಾಶ್ರಿತರಿಗೆ ನೀಡಲಾಗಿದ್ದು, ಅವರು ಮನೆಗೆ ಹಿಂದಿರುಗುವಾಗ ಅಕ್ಕಿ ಹಾಗು ಇತರ ಅವಶ್ಯಕ ಸಾಮಗ್ರಿಗಳನ್ನು ಒದಗಿಸಲಾಗಿದೆ. ಜುಮಾ ಮಸೀದಿಯಲ್ಲಿ ಆಶ್ರಯ ಪಡೆದ 78ಕ್ಕೂ ಅಧಿಕ ಜನರಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಚಾಲಿಯಾರ್ ಗ್ರಾಮ ಪಂಚಾಯತ್ ಮುಖ್ಯಸ್ಥ ಪಿ.ಟಿ. ಉಸ್ಮಾನ್ ಹೇಳುತ್ತಾರೆ.

ನೆರೆ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಈ ಕುಟುಂಬಗಳು ಮನೆಗೆ ಹಿಂದಿರುಗಿವೆ. ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಎರಡು ದೇವಾಲಯಗಳನ್ನು ಮುಸ್ಲಿಮ್ ಯುವಕರು ಶುಚಿಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News