×
Ad

ಅಳುತ್ತಿರುವ ಅಜ್ಜಿ-ಮೊಮ್ಮಗಳ ವೈರಲ್ ಚಿತ್ರದ ಹಿಂದಿನ ಸತ್ಯ ಇಲ್ಲಿದೆ

Update: 2018-08-23 17:15 IST

ಹೊಸದಿಲ್ಲಿ, ಆ. 23: ವೃದ್ಧೆ ಮತ್ತು ಶಾಲಾ ಬಾಲಕಿಯೊಬ್ಬಳು ಕಣ್ಣೀರಿಡುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಹಲವಾರು ಸಾಮಾಜಿಕ ಜಾಲತಾಣ ಪೋಸ್ಟ್ ಗಳ ಪ್ರಕಾರ ಬಾಲಕಿಯೊಬ್ಬಳು ಶಾಲಾ ಪ್ರವಾಸದ ಅಂಗವಾಗಿ ವೃದ್ಧಾಶ್ರಮಕ್ಕೆ ಹೋಗಿದ್ದಾಗ ಅಲ್ಲಿ ತನ್ನ ಅಜ್ಜಿಯನ್ನು ನೋಡಿ ಕಣ್ಣೀರಿಟ್ಟ ಚಿತ್ರ ಇದಾಗಿದೆ.

ಆಕೆಯ ಹೆತ್ತವರು ಅಜ್ಜಿ ಸಂಬಂಧಿಕರ ಮನೆಯಲ್ಲಿದ್ದಾರೆಂದು ಆಕೆಗೆ ಸುಳ್ಳು ಹೇಳಿ, ಅಜ್ಜಿಯನ್ನು ವೃದ್ಧಾಶ್ರಮದಲ್ಲಿ ಸೇರಿಸಿದ್ದರೆಂದೂ ಅನಿರೀಕ್ಷಿತವಾಗಿ ಅಜ್ಜಿ-ಮೊಮ್ಮಗಳು ಭೇಟಿಯಾದ ಕ್ಷಣ ಇದಾಗಿದೆಯೆಂದೂ ಹೇಳಲಾಗಿತ್ತು.

ಆದರೆ ಬಿಬಿಸಿ ವರದಿಯೊಂದರ ಪ್ರಕಾರ ಈ ಚಿತ್ರವನ್ನು ಕಲ್ಪಿತ್ ಎಸ್ ಭಚ್ಚೆಕ್ ಎಂಬ ಛಾಯಾಗ್ರಾಹಕ 2007ರಲ್ಲಿ ಕ್ಲಿಕ್ಕಿಸಿದ್ದರು. ಚಿತ್ರದಲ್ಲಿರುವುದು ಅಜ್ಜಿ ಮತ್ತು ಮೊಮ್ಮಗಳೇ ಆಗಿದ್ದರೂ ಅದರ ಹಿಂದಿನ ಕಥೆ ಮಾತ್ರ ನಿಜವಲ್ಲ. ಚಿತ್ರದಲ್ಲಿ ಕಾಣಿಸಿರುವ ಅಜ್ಜಿ ದಮಯಂತಿ ಸ್ವಇಚ್ಛೆಯಿಂದ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದು, ಒಮ್ಮೆ ಮೊಮ್ಮಗಳು ಅಜ್ಜಿಯನ್ನು ನೋಡಿ ಭಾವಾತ್ಮಕವಾಗಿ ಅತ್ತಿದ್ದಳಷ್ಟೆ, ಮೇಲಾಗಿ ತನ್ನ ಅಜ್ಜಿ ವೃದ್ಧಾಶ್ರಮದಲ್ಲಿದ್ದಾರೆಂದು ಆಕೆಗೆ ಮೊದಲೇ ಗೊತ್ತಿತ್ತು. ಇಬ್ಬರ ಸಂದರ್ಶನವನ್ನೂ ಬಿಬಿಸಿ ನಡೆಸಿ ಸತ್ಯವನ್ನು ಬಹಿರಂಗ ಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News