ಭಾರತದ ಅಧಿಕೃತ ವೆಬ್‌ಸೈಟ್ ಚೀನಿಯರಿಂದ ಅತ್ಯಧಿಕ ಹ್ಯಾಕ್

Update: 2018-08-23 19:18 GMT

ಹೊಸದಿಲ್ಲಿ, ಆ. 23: ಭಾರತದ ಅಧಿಕೃತ ವೆಬ್‌ಸೈಟ್ ಮೇಲೆ ದಾಳಿ ಮಾಡುವವರಲ್ಲಿ ಗರಿಷ್ಠ ಹ್ಯಾಕರ್‌ಗಳು ಚೀನದವರು. ಅನಂತರ ಅಮೆರಿಕ ಹಾಗೂ ರಶ್ಯಾದವರು ಎಂದು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನದ ಅಡಿಯಲ್ಲಿ ಬರುವ ಇಲಾಖೆಗಳಾದ ರಾಷ್ಟ್ರೀಯ ಭದ್ರತಾ ಏಜೆನ್ಸಿ ಹಾಗೂ ಇತರ ಭದ್ರತಾ ಏಜೆನ್ಸಿಗಳಿಗೆ ವರದಿ ರವಾನಿಸಿದೆ.

ಭಾರತೀಯ ಸೈಬರ್‌ಸ್ಪೇಸ್ ಅನ್ನು ಅತಿಕ್ರಮಿಸುವ ಹಾಗೂ ದುರುದ್ದೇಶಪೂರಿತ ಚಟುವಟಿಕೆ ನಡೆಸಲು ಪಾಕಿಸ್ತಾನದ ದುಷ್ಕರ್ಮಿಗಳು ಜರ್ಮನಿ ಹಾಗೂ ಕೆನಡಾದ ಸೈಬರ್‌ಸ್ಪೇಸ್ ಬಳಸಿ ಕೊಳ್ಳುವ ಸಾಧ್ಯತೆ ಇದೆ. 2018 ಎಪ್ರಿಲ್‌ನಿಂದ ಜೂನ್ ವರೆಗೆ ನಡೆದ ಸೈಬರ್ ದಾಳಿ ವಿಶ್ಲೇಷಿಸಿ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ-ಇನ್)ಈ ವರದಿ ಸಿದ್ದಗೊಳಿಸಿದೆ. ಹ್ಯಾಕ್ ಹಾಗೂ ಫಿಶ್ಶಿಂಗ್‌ನಂತಹ ಸೈಬರ್ ಭದ್ರತಾ ಬೆದರಿಕೆಗಳನ್ನು ಸಚಿವಾಲಯದ ಸಿಇಆರ್‌ಟಿ-ಇನ್ ನಿರ್ವಹಿಸುತ್ತದೆ. ಇದು ಸೈಬರ್ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ, ವಿಶ್ಲೇಷಿಸುವ, ಪ್ರಸಾರ ಮಾಡುವ ಹಾಗೂ ಸೈಬರ್ ಬೆದರಿಕೆ ಘಟನೆಗಳ ಬಗ್ಗೆ ಎಚ್ಚರಿಸುವ ಕೆಲಸ ಮಾಡುತ್ತದೆ.

ಭಾರತದ ಸೈಬರ್‌ಸ್ಪೇಸ್ ಅನ್ನು ನಿರ್ದಿಷ್ಟ ದಾರಿಯ ಮೂಲಕ ಚೀನ ನಿರಂತರ ಅತಿಕ್ರಮಿಸುತ್ತಿದೆ ಎಂಬುದನ್ನು ಗಮನಿಸಲಾಗಿದೆ. ಭಾರತೀಯ ಅಧಿಕೃತ ವೆಬ್‌ಸೈಟ್‌ಗಳ ಮೇಲೆ ಒಟ್ಟು ಸಂಖ್ಯೆಯ ಸೈಬರ್ ದಾಳಿಯಲ್ಲಿ ಶೇ. 35ರಷ್ಟು ಚೀನ ನಡೆಸುತ್ತಿದೆ. ಸೈಬರ್ ದಾಳಿ ನಡೆಸುವುದರಲ್ಲಿ ಅನಂತರದ ಸ್ಥಾನವನ್ನು ಕ್ರಮವಾಗಿ ಅಮೆರಿಕ (ಶೇ. 17), ರಶ್ಯ (ಶೇ. 15), ಪಾಕಿಸ್ತಾನ (ಶೇ. 9), ಕೆನಡಾ (ಶೇ. 7) ಹಾಗೂ ಜರ್ಮನಿ (ಶೇ. 5) ಹೊಂದಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News