ಬಿಲ್ ಗೇಟ್ಸ್ ಪ್ರತಿಷ್ಠಾನದಿಂದ ಕೇರಳಕ್ಕೆ 4. ಕೋಟಿ ರೂ. ನೆರವು

Update: 2018-08-24 17:26 GMT

ಹೊಸದಿಲ್ಲಿ, ಆ.24: ಮಳೆ-ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೇರಳ ರಾಜ್ಯಕ್ಕೆ ಅಮೆರಿಕದ ಬಿಲ್ ಮತ್ತು ಮೆಲಿಂಡ ಗೇಟ್ಸ್ ಪ್ರತಿಷ್ಠಾನ 4 ಕೋಟಿ ರೂ. ನೆರವು ನೀಡಲು ಮುಂದಾಗಿದೆ. ಮೈಕ್ರೊಸಾಫ್ಟ್ ಸಂಸ್ಥೆಯ ಸ್ಥಾಪಕ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡ ಗೇಟ್ಸ್ ನಡೆಸುತ್ತಿರುವ ಬಿಲ್ ಮತ್ತು ಮೆಲಿಂಡ ಗೇಟ್ಸ್ ಪ್ರತಿಷ್ಠಾನ ಕೇರಳದಲ್ಲಿ ಸಂತ್ರಸ್ತರು ತಮ್ಮ ಬದುಕನ್ನು ಪುನರ್‌ರೂಪಿಸಲು ಸರಕಾರ ರೂಪಿಸುವ ಯೋಜನೆಗಳಿಗೆ ಬಳಸಲು ಈ ಮೊತ್ತವನ್ನು ನೀಡುತ್ತಿದೆ ಎಂದು ಪ್ರತಿಷ್ಠಾನದ ವಕ್ತಾರರು ತಿಳಿಸಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ನಾವು ಕೇರಳದ ಜನರೊಂದಿಗಿದ್ದೇವೆ. ನಮ್ಮ ಸಂಸ್ಥೆ ಕೇರಳದಲ್ಲಿ ಸುರಿದ ಶತಮಾನದ ಭೀಕರ ಮಳೆಯಿಂದಾಗಿ ತಮ್ಮ ಮನೆ ಹಾಗೂ ಬದುಕನ್ನು ಕಳೆದುಕೊಂಡಿರುವವರ ಜೀವನದಲ್ಲಿ ಹೊಸ ಬೆಳಕನ್ನು ಮೂಡಿಸಲು ಬಯಸುತ್ತದೆ ಎಂದು ಗೇಟ್ಸ್ ಪ್ರತಿಷ್ಠಾನದ ಜಾಗತಿಕ ಅಭಿವೃದ್ಧಿ ವಿಭಾಗದ ಅಧ್ಯಕ್ಷ ಕ್ರಿಸ್ ಇಲ್ಯಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News