ಈ ವಾಟ್ಸ್‌ಆ್ಯಪ್ ತಂತ್ರ ನಿಮ್ಮ ಬಹಳಷ್ಟು ಸಮಯವನ್ನು ಉಳಿಸಬಲ್ಲದು

Update: 2018-08-25 12:30 GMT

ಇಂದು ಮೊಬೈಲ್ ಪೋನ್ ಹೊಂದಿರುವರ ಬದುಕಿನ ಅವಿಭಾಜ್ಯ ಅಂಗವಾಗಿರುವ ವಾಟ್ಸ್‌ಆ್ಯಪ್‌ನಲ್ಲಿ ಹಲವಾರು ವೈಶಿಷ್ಟಗಳಿವೆಯಾದರೂ ಹೆಚ್ಚಿನವರಿಗೆ ಅವುಗಳು ಗೊತ್ತೇ ಇರುವುದಿಲ್ಲ ಅಥವಾ ಅವುಗಳ ಉಪಯುಕ್ತತೆ ತಿಳಿದಿರುವುದಿಲ್ಲ. ಹೆಚ್ಚಿನ ವಾಟ್ಸ್‌ಆ್ಯಪ್ ಬಳಕೆದಾರರು ಚಾಟ್,ಸ್ಟೇಟಸ್ ಮತ್ತು ಮೀಡಿಯಾ ಶೇರಿಂಗ್ ಇವುಗಳಿಗಷ್ಟೇ ಸೀಮಿತರಾಗಿರುತ್ತಾರೆ. ಆದರೆ ವ್ಯಾಟ್ಸ್‌ಆ್ಯಪ್‌ನಲ್ಲಿ ನಿಮಗೆ ಗೊತ್ತಿಲ್ಲದಿರಬಹುದಾದ ಹಲವಾರು ವೈಶಿಷ್ಟಗಳಿವೆ. ನಿಮಗೆ ಮುಖ್ಯವಾದ ಸಂಪರ್ಕ ವ್ಯಕ್ತಿಗಳಿಂದ ಸಂದೇಶಗಳನ್ನು ನೀವು ತಪ್ಪಿಸಿಕೊಳ್ಳದಂತೆ ಚಾಟ್‌ಗಳನ್ನು ಲಿಸ್ಟ್‌ನ ಅಗ್ರಸ್ಥಾನದಲ್ಲಿ ಪಿನ್ ಮಾಡುವುದು ಇಂತಹ ಒಂದು ವೈಶಿಷ್ಟವಾಗಿದೆ. ಈ ಟ್ರಿಕ್ ನಿಮ್ಮ ಬಹಳಷ್ಟು ಸಮಯವನ್ನು ಉಳಿಸುವುದಲ್ಲದೆ,ನೀವು ಮುಖ್ಯವಾದ ವ್ಯಕ್ತಿಯ ಜೊತೆಗೆ ಚಾಟ್ ಮಾಡುವುದಿದ್ದಾಗ ಕಿರಿಕಿರಿಯನ್ನು ತಪ್ಪಿಸುತ್ತದೆ.

 ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಅನ್ನು ಪಿನ್ ಮಾಡುವುದು ಸರಳವಾಗಿದೆ. ನೀವು ಚಾಟ್‌ನ ಮೇಲೆ ಸುದೀರ್ಘವಾಗಿ ಒತ್ತಿದರೆ ಅದಕ್ಕಾಗಿ ಮೆನು ಆಯ್ಕೆಗಳು ಸ್ಟೇಟಸ್ ಬಾರ್‌ನಲ್ಲಿ ತೆರೆದುಕೊಳ್ಳುತ್ತವೆ. ಈಗ ಮೆನು ಆಯ್ಕೆಗಳ ಅತ್ಯಂತ ಎಡಬದಿಯಲ್ಲಿರುವ ‘ಪಿನ್’ ಐಕಾನ್‌ನ್ನು ಕಾಣಬಹುದು. ಅದರ ಮೇಲೆ ಒತ್ತಿದರೆ ಕೆಲಸ ಮುಗಿಯುತ್ತದೆ. ಚಾಟ್ ವಾಟ್ಸ್‌ಆ್ಯಪ್ ಚಾಟ್ ಸ್ಕ್ರೀನ್‌ನಲ್ಲಿ ಎಲ್ಲ ಕನ್ವರ್ಸೇಷನ್‌ಗಳಿಗಿಂತ ಮೇಲೆ ಪಿನ್ ಆಗಿರುತ್ತದೆ. ನೀವು ತಪ್ಪಿಸಿಕೊಳ್ಳಲು ಬಯಸದ ಮುಖ್ಯವಾದ ಗರಿಷ್ಠ ಮೂರು ಚಾಟ್‌ಗಳನ್ನು ಈ ರೀತಿಯಲ್ಲಿ ಪಿನ್ ಮಾಡಬಹುದು.

ಕೆಲವರಿಗೆ ಪ್ರತಿದಿನ ನೂರಾರು ವಾಟ್ಸ್‌ಆ್ಯಪ್ ಸಂದೇಶಗಳು ಬರುತ್ತಿರುತ್ತವೆ, ಎಷ್ಟೆಂದರೆ ಉತ್ತರಿಸಲು ಬಯಸುವ ಸಂದೇಶಗಳನ್ನು ಹುಡುಕುವುದೇ ಕಷ್ಟವಾಗುತ್ತದೆ. ಇಂತಹವರಿಗೆ ಚಾಟ್‌ಗಳನ್ನು ಪಿನ್ ಮಾಡುವ ಈ ಸೌಲಭ್ಯ ತುಂಬ ಉಪಯೋಗವಾಗುತ್ತದೆ. ಚಾಟ್‌ಗಳನ್ನು ಪಿನ್ ಮಾಡುವುದು ಸಮಯವನ್ನು ಉಳಿಸುವ ಜೊತೆಗೆ ಕನ್ವರ್ಸೇಷನ್‌ಗಳನ್ನು ಚಾಟ್ ಸ್ಕ್ರೀನ್‌ನ ಕೆಳಭಾಗದಲ್ಲಿ ಒಪ್ಪವಾಗಿಡುತ್ತದೆ.

ಪಿನ್ಡ್ ಚಾಟ್‌ಗಳೊಂದಿಗೆ ನಿಮ್ಮ ಕುಟುಂಬ ಸದಸ್ಯರು ಅಥವಾ ಆಪ್ತಮಿತ್ರರಿಗೆ ಟೆಕ್ಸ್ಟ್‌ಗಳನ್ನು ಕಳುಹಿಸಲು ಸಂದೇಶಗಳ ಉದ್ದನೆಯ ಪಟ್ಟಿಯನ್ನು ಸ್ಕ್ರೋಲ್ ಮಾಡಬೇಕಾಗಿಲ್ಲ. ಬಳಕೆದಾರರು ಮೂರು ಅತ್ಯಂತ ಪ್ರಮುಖ ಗುಂಪುಗಳ ಅಥವಾ ವ್ಯಕ್ತಿಗತ ಚಾಟ್‌ಗಳನ್ನು ಸುಲಭವಾಗಿ ತಲುಪಲು ಅವುಗಳನ್ನು ಪಿನ್ ಮಾಡಬಹುದು. ಚಾಟ್‌ನ್ನು ಟ್ಯಾಪ್ ಮಾಡಿ ಒತ್ತಿ ಹಿಡಿದು,ಬಳಿಕ ಸ್ಕ್ರೀನ್ ಮೇಲ್ಭಾಗದಲ್ಲಿರುವ ಪಿನ್ ಐಕಾನ್‌ನ್ನು ಟ್ಯಾಪ್ ಮಾಡಿದರೆ ನಿಮ್ಮ ಚಾಟ್ ತೆರೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News