2007ರ ಹೈದರಾಬಾದ್ ಸ್ಫೋಟ ಪ್ರಕರಣ : ತೀರ್ಪು ಪ್ರಕಟಣೆ ಸೆ.4ರವರೆಗೆ ಮುಂದೂಡಿಕೆ

Update: 2018-08-27 15:42 GMT

ಹೈದರಾಬಾದ್, ಆ.27: 2007ರಲ್ಲಿ ಹೈದರಾಬಾದ್‌ನಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಿಶೇಷ ನ್ಯಾಯಾಲಯ ಸೆ.4ರವರೆಗೆ ಮುಂದೂಡಿದೆ. 11 ವರ್ಷದ ಹಿಂದೆ ಹೈದರಾಬಾದ್‌ನ ಗೋಕುಲ್ ಚಾಟ್ ಹಾಗೂ ಲುಂಬಿನಿ ಪಾರ್ಕ್‌ನಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 42 ಮಂದಿ ಮೃತರಾಗಿ 60ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳಾದ ಮುಹಮ್ಮದ್ ಸಾದಿಕ್, ಅನ್ಸಾರ್ ಅಹ್ಮದ್ ಬಾದ್‌ಶಾ ಶೇಕ್, ಅಕ್ಬರ್ ಇಸ್ಮಾಯಿಲ್ ಹಾಗೂ ಅನಿಕ್ ಶಫೀಕ್ ಸಯ್ಯದ್ ಎಂಬವರನ್ನು ಬಂಧಿಸಿ ಚೆರ್ಲಪಲ್ಲಿ ಸೆಂಟ್ರಲ್ ಜೈಲಿನಲ್ಲಿರಿಸಲಾಗಿದೆ. ಆರೋಪಿಗಳು ಇಂಡಿಯನ್ ಮುಜಾಹಿದೀನ್ ಸಂಘಟನೆಯ ಕಾರ್ಯಕರ್ತರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News