ಮುಂಬೈ:ನೀರಿನ ಕೊರತೆ ನೀಗಿಸಿದ ಭಾರೀ ಮಳೆ

Update: 2018-08-27 16:38 GMT
ಸಾಂದರ್ಭಿಕ ಚಿತ್ರ

ಮುಂಬೈ,ಆ.27: ಕಳೆದ ಕೆಲವು ದಿನಗಳಲ್ಲಿ ಮುಂಬೈ ಮತ್ತು ಉಪನಗರಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕುಡಿಯುವ ನೀರನ್ನು ಪೂರೈಸುವ ಮಹಾನಗರದಲ್ಲಿಯ ಏಳು ಮುಖ್ಯ ಸರೋವರಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಇದರಿಂದಾಗಿ ನಗರದ ನಿವಾಸಿಗಳಿಗೆ ಮುಂದಿನ ವರ್ಷ ನೀರಿನ ಪೂರೈಕೆಯಲ್ಲಿ ಕಡಿತದ ಆತಂಕ ನಿವಾರಣೆಯಾಗಿದೆ.

ಎಲ್ಲ ಏಳೂ ಸರೋವರಗಳು ಒಟ್ಟು ನೀರಿನ ಪೂರೈಕೆ ಅಗತ್ಯದ ಶೇ.94.89ರಷ್ಟು ನೀರನ್ನು ಈಗಾಗಲೇ ಹೊಂದಿವೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಸೋಮವಾರ ಇಲ್ಲಿ ತಿಳಿಸಿದರು.

ಮುಂಗಾರು ಮಳೆ ಅಂತ್ಯಗೊಳ್ಳಲು ಇನ್ನೂ ಸಮಯವಿದೆ. ಹೀಗಾಗಿ ಸರೋವರಗಳಲ್ಲಿ ನೀರಿನ ಮಟ್ಟ ಇನ್ನಷ್ಟು ಹೆಚ್ಚುವ ವಿಶ್ವಾಸವಿದೆ ಎಂದರು.

ಮೋದಕ್ ಸಾಗರ,ತಾನ್ಸಾ,ವಿಹಾರ್,ತುಳಸಿ,ಅಪ್ಪರ ವೈತರಣ,ಭಾಟ್ಸಾ ಮತ್ತು ಮಿಡ್ಲ್ ವೈತರಣ ಈ ಏಳು ಜಲಾಶಯಗಳಿಂದ ಮುಂಬೈ ಮಹಾನಗರಕ್ಕೆ ನೀರು ಪೂರೈಕೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News