ಎಚ್ಚರಿಕೆಗಳ ನಡುವೆಯೂ ಜೋಡುಪಾಲಕ್ಕೆ ಹೋಗಿ ಹಲವರನ್ನು ರಕ್ಷಿಸಿದೆವು

Update: 2018-08-28 17:02 GMT

ಮಡಿಕೇರಿ, ಆ.28: ಬೆಟ್ಟಗಳು ಕುಸಿದು ಭಾರೀ ಹಾನಿಗೀಡಾಗಿದ್ದ ಜೋಡುಪಾಲಕ್ಕೆ ರಕ್ಷಣಾ ಕೆಲಸಕ್ಕೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ ಹೋಗಲು ಸನ್ನದ್ಧವಾದಾಗ “ಅಲ್ಲಿಗೆ ಹೋಗಬೇಡಿ. ಹೋದರೆ ನಿಮ್ಮ ಮೃತದೇಹವೂ ಸಿಗಲ್ಲ” ಎಂದು ಅಲ್ಲಿದ್ದ ತುಂಬಾ ಮಂದಿ ಹೇಳಿದರು. ಆದರೆ ನಾವು ಅಲ್ಲಿಗೆ ಹೋಗಿ ಸಂಕಷ್ಟಕ್ಕೆ ಸಿಲುಕಿದ ಜನರನ್ನು ರಕ್ಷಿಸಿದೆವು ಎಂದು ಎಸ್ಕೆಎಸ್ಸೆಸ್ಸೆಫ್ ತಂಡದ ನಾಯಕ ಜಮಾಲ್ ಬೆಳ್ಳಾರೆ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

ಕಲ್ಲುಗುಂಡಿಯ ವಿಪಿನ್ ಹಾಗೂ ಇತರರು ನಮ್ಮನ್ನು ದುರಂತ ನಡೆದ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಮ್ಮ ಕಣ್ಣ ಮುಂದೆಯೇ ಗುಡ್ಡಗಳು ಕುಸಿಯುತ್ತಿದ್ದವು. ಮನೆಗಳು ಧರೆಗುರುಳುತ್ತಿದ್ದವು. ಒಂದು ಮೃತದೇಹ ಕೂಡಾ ನಮ್ಮ ಮುಂದೆ ಬಿದ್ದಿತ್ತು. ಅದನ್ನು ಬಿಟ್ಟು ಬರಲು ನಮ್ಮ ಮನಸ್ಸು ಒಪ್ಪಲೇ ಇಲ್ಲ. ಹೊಳೆಯಲ್ಲಿ ರಭಸದಿಂದ ಹರಿಯುವ ನಿರಿನೊಂದಿಗೆ ಬಂಡೆಗಳು ಕೂಡಾ ಉರುಳಿ ಬರುತ್ತಿದ್ದವು. ಹೊಳೆ ದಾಟುವ ಪರಿಸ್ಥಿಯಲ್ಲಿರಲಿಲ್ಲ. ಆದರೂ ನಾವು ಹೊಳೆ ದಾಟಿ ಹಲವರನ್ನು ರಕ್ಷಿಸಿದೆವು ಎಂದು ಅವರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News