ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಸಿದ್ಧಗೊಳ್ಳುತ್ತಿರುವ ಪ್ರಸ್ತಾಪ: ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ

Update: 2018-08-29 16:49 GMT

ಇಸ್ಲಾಮಾಬಾದ್, ಆ. 29: ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಪ್ರಸ್ತಾಪವೊಂದನ್ನು ಇಮ್ರಾನ್ ಖಾನ್ ಸರಕಾರ ಸಿದ್ಧಪಡಿಸುತ್ತಿದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ ಹೇಳಿದ್ದಾರೆ.

‘‘ನಾವು ಪ್ರಸ್ತಾಪವನ್ನು ಒಂದು ವಾರದಲ್ಲಿ ಸಿದ್ಧಪಡಿಸುತ್ತೇವೆ ಹಾಗೂ ಸಂಬಂಧಪಟ್ಟ ಎಲ್ಲರಿಗೂ ಅದನ್ನು ಕಳುಹಿಸಿಕೊಡುತ್ತೇವೆ’’ ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೇಳಿದರು. ಆದಾಗ್ಯೂ, ಪ್ರಸ್ತಾಪದ ವಿವರಗಳನ್ನು ಅವರು ಬಹಿರಂಗಪಡಿಸಲಿಲ್ಲ.

‘ಸಂಘರ್ಷ ಇತ್ಯರ್ಥಕ್ಕೆ ಮಾದರಿಯಾಗಿರುವ’ ಪ್ರಸ್ತಾಪವನ್ನು ಸಚಿವ ಸಂಪುಟಕ್ಕೆ ಹಾಗೂ ಪ್ರಧಾನಿ ಇಮ್ರಾನ್‌ರಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ‘‘ಪ್ರಸ್ತಾಪದ ಕರಡು ಅಂಗೀಕಾರಗೊಂಡರೆ ನಾವು ಮುಂದುವರಿಯುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News