ಮುಶರ್ರಫ್ ಬಂಧನ ಮನವಿಯನ್ನು ತಿರಸ್ಕರಿಸಿದ ಇಂಟರ್‌ಪೋಲ್: ಪಾಕ್

Update: 2018-08-29 16:51 GMT

ಇಸ್ಲಾಮಾಬಾದ್, ಆ. 29: ಜನರಲ್ ಪರ್ವೇಝ್ ಮುಶರ್ರಫ್‌ರನ್ನು ಬಂಧಿಸುವಂತೆ ಪಾಕಿಸ್ತಾನ ಮಾಡಿರುವ ಮನವಿಯನ್ನು ಇಂಟರ್‌ಪೋಲ್ ತಿರಸ್ಕರಿಸಿದೆ ಎಂದು ಪಾಕಿಸ್ತಾನ ಸರಕಾರ ಬುಧವಾರ ವಿಶೇಷ ನ್ಯಾಯಾಲಯವೊಂದಕ್ಕೆ ತಿಳಿಸಿದೆ.

ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಮುಶರ್ರಫ್ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ವರದಿ ಒಪ್ಪಿಸಿದ ಸರಕಾರ, ರಾಜಕೀಯ ಸ್ವರೂಪದ ಪ್ರಕರಣಗಳಲ್ಲಿ ತಾನು ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಇಂಟರ್‌ಪೋಲ್ ತಿಳಿಸಿದೆ ಎಂದು ಹೇಳಿದೆ.

2007ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನವನ್ನು ಅಮಾನತುಗೊಳಿಸಿರುವುದಕ್ಕಾಗಿ ಮುಶರ್ರಫ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News