ಪರಮಾಣು ಒಪ್ಪಂದವನ್ನು ತೊರೆಯಲೂ ಸಿದ್ಧ: ಖಾಮಿನೈ

Update: 2018-08-29 16:52 GMT

ಟೆಹರಾನ್, ಆ. 29: ಪ್ರಬಲ ದೇಶಗಳೊಂದಿಗೆ ಮಾಡಿಕೊಂಡಿರುವ ಪರಮಾಣು ಒಪ್ಪಂದ ಇರಾನ್‌ನ ಹಿತಾಸಕ್ತಿಗಳನ್ನು ರಕ್ಷಿಸಲು ವಿಫಲವಾದರೆ ದೇಶ ಅದರಿಂದ ಹೊರಬರಬಹುದಾಗಿದೆ ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಬುಧವಾರ ಎಚ್ಚರಿಸಿದ್ದಾರೆ.

 ‘‘ಪರಮಾಣು ಒಪ್ಪಂದವು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂಬ ತೀರ್ಮಾನಕ್ಕೆ ನಾವು ಬಂದರೆ, ಸಹಜವಾಗಿಯೇ ನಾವು ಅದನ್ನು ಬದಿಗೆ ಸರಿಸುತ್ತೇವೆ’’ ಎಂದು ಸಚಿವ ಸಂಪುಟ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News