ನಾಗ ಸಾಧು ಅವತಾರದಲ್ಲಿ ಸೈಫ್ ಅಲಿ ಖಾನ್

Update: 2018-08-31 13:05 GMT

ಓರ್ವ ನಟನಾಗಿ ಸೈಫ್ ಅಲಿ ಖಾನ್ ತಮ್ಮ ನಟನಾ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಲೇ ಬಂದಿದ್ದಾರೆ. ಅವರು ಇತ್ತೀಚೆಗೆ ನಟಿಸಿರುವ ‘ಕಲಾಕಾಂಡಿ’ ಸಿನೆಮಾ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ಸರಣಿ ಸೇಕ್ರೆಡ್ ಗೇಮ್ಸ್ ಮೂಲಕ ಸೈಫ್, ಬಾಕ್ಸ್ ಆಫೀಸ್‌ನ ಮಾಮೂಲಿ ಜಿದ್ದಾಜಿದ್ದಿನಿಂದ ದೂರ ಉಳಿಯಲು ಬಯಸಿರುವುದು ಸ್ಪಷ್ಟವಾಗಿತ್ತು. ಇದೀಗ ಅವರ ಮುಂದಿನ ಸಿನೆಮಾದಲ್ಲೂ ಸೈಫ್ ವಿಭಿನ್ನವಾದ ಪಾತ್ರವನ್ನು ನಿಭಾಯಿಸಲು ಮುಂದಾಗಿದ್ದಾರೆ. ಸೈಫ್ ನಟಿಸುತ್ತಿರುವ ‘ಹಂಟರ್’ ಸಿನೆಮಾದ ಚಿತ್ರೀಕರಣ ಮುಂಬೈಯ ಫಿಲ್ಮಿಸ್ತಾನ್ ಸ್ಟುಡಿಯೊದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸೈಫ್ ನಾಗ ಸಾಧುವಿನ ಪಾತ್ರವನ್ನು ಮಾಡಲಿದ್ದಾರೆ. ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಸೈಫ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ‘ಹಂಟರ್’ ಚಿತ್ರೀಕರಣದ ವೇಳೆಯ ಕೆಲವೊಂದು ಫೋಟೊಗಳು ಸೋರಿಕೆಯಾಗಿದ್ದು ಅದರಲ್ಲಿ ಸೈಫ್ ಕೆಂಪು ಅಂಗಿ, ಬಿಳಿ ಲಂಗ ಧರಿಸಿ ತಲೆಗೆ ಮುಂಡಾಸು ಕಟ್ಟಿಕೊಂಡಿದ್ದು ವಿಚಿತ್ರವಾಗಿ ಕಾಣುತ್ತಿದ್ದಾರೆ. ‘ಹಂಟರ್’ ಸಿನೆಮಾದಲ್ಲಿ ಸೈಫ್ ಜೊತೆಗೆ ಆರ್. ಮಾಧವನ್ ಕೂಡಾ ನಟಿಸುತ್ತಿದ್ದಾರೆ. ನವದೀಪ್ ಸಿಂಗ್ ಈ ಸಿನೆಮಾವನ್ನು ನಿರ್ದೇಶಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News