ಇವರಿಗಾಗಿ ಹೈಟಕ್ ಆಗಲಿದೆ ಮುಂಬೈ ಅರ್ಥೂರ್ ಕಾರಾಗೃಹ !

Update: 2018-08-31 17:00 GMT

ಮುಂಬೈ, ಆ. 31: ಬಂಧನದಿಂದ ತಪ್ಪಿಸಲು ಮಲ್ಯರಂತಹ ವಂಚಕರು ‘ಕಾರಾಗೃಹದ ದುಸ್ಥಿತಿ’ ಉಲ್ಲೇಖಿಸುತ್ತಿರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರಕಾರ ಮುಂಬೈಯ ಅರ್ಥೂರ್ ಕಾರಾಗೃಹದ ಒಳಗಡೆ ‘ಅಂತರ್ ರಾಷ್ಟ್ರೀಯ ಹಾಗೂ ಮಾನವ ಹಕ್ಕುಗಳ ಗುಣಮಟ್ಟ’ವನ್ನು ಹೊಂದಿದ ವಿಶೇಷ ಸೆಲ್‌ಗಳನ್ನು ನಿರ್ಮಿಸಲು ನಿರ್ಧರಿಸಿದೆ. ಕಾರಾಗೃಹದ ಆವರಣದ ಒಳಗಡೆ ಇರುವ ಹಳೆಯ ಕಟ್ಟಡ ಕೆಡವಿ ಪ್ರತ್ಯೇಕ ಸೆಲ್ ಹಾಗೂ ಬಾಗ್ಸ್‌ಗಳನ್ನು ಒಳಗೊಂಡ ಜೈಲ್ ಬ್ಲಾಕ್ ಸಿದ್ಧಗೊಳ್ಳಲಿದೆ. ಮೂರು ಮಹಡಿಗಳ ಈ ಕಟ್ಟಡದಲ್ಲಿ ಗಾಳಿ ಬೆಳಕು ಸರಾಗವಾಗಿ ಪ್ರವೇಶಿಸಲಿದೆ.

ಈ ಪ್ರಸ್ತಾಪ ಗಂಭೀರ ಪರಿಗಣನೆಯಲ್ಲಿದೆ. ಯುರೋಪ್ ಹಾಗೂ ಬ್ರಿಟಿಶ್ ಗುಣಮಟ್ಟದ, ಮಾನವ ಹಕ್ಕುಗಳ ಎಲ್ಲ ಗುಣಮಟ್ಟಗಳನ್ನು ಒಳಗೊಂಡ ನೂತನ ಕಟ್ಟಡವನ್ನು ನಿರ್ಮಿಸಲು ನಾವು ಬಯಸಿದ್ದೇವೆ . ಕೋಟಿಗಟ್ಟಲೆ ರೂಪಾಯಿ ವಂಚಿಸಿ ದೇಶದಿಂದ ಪರಾರಿಯಾಗಿರುವ ಆರೋಪಿಗಳು ಭಾರತದ ಕಾರಾಗೃಹ ಚೆನ್ನಾಗಿಲ್ಲ ಎಂದು ಬಂಧನದಿಂದ ತಪ್ಪಿಸಿಕೊಳ್ಳುವುದನ್ನು ನಾವು ಬಯಸುವುದಿಲ್ಲ ಎಂದು ಮಹಾರಾಷ್ಟ್ರ ಸರಕಾರದ ಅಧಿಕಾರಿ ತಿಳಿಸಿದ್ದಾರೆ.

ಆದಾಗ್ಯೂ, ಈ ಕಾರಾಗೃಹದ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸರಕಾರದ ಪ್ರಾಧಿಕಾರ ಯಾವುದೇ ಸಮಯದ ಗಡು ವಿಧಿಸಿಲ್ಲ. ಈ ವಿಷಯದ ಕುರಿತು ನಾವು ಯಾವುದೇ ಟೆಂಡರ್ ನೀಡಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News