×
Ad

ತ್ಯಾಜ್ಯ ವಿಲೇವಾರಿ: ಕೇರಳವನ್ನು ತರಾಟೆಗೆ ತೆಗೆದುಕೊಂಡ ರಾಷ್ಟ್ರೀಯ ಹಸಿರು ಪೀಠ

Update: 2018-08-31 22:30 IST

ಹೊಸದಿಲ್ಲಿ, ಆ.31: ರಾಜ್ಯದಲ್ಲಿ ತ್ಯಾಜ್ಯ ವಿಲೇವಾರಿಯಂಥ ಗಂಭೀರ ವಿಷಯದಲ್ಲಿ ಉದಾಸೀನ ಮತ್ತು ಸೂಕ್ಷ್ಮತೆರಹಿತ ಧೋರಣೆಯನ್ನು ಅನುಸರಿಸಿರುವ ಕಾರಣಕ್ಕೆ ಕೇರಳ ಸರಕಾರವನ್ನು ರಾಷ್ಟ್ರೀಯ ಹಸಿರು ಪೀಠ ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ಒಂದು ತಿಂಗಳ ಒಳಗಾಗಿ ತ್ಯಾಜ್ಯದ ಸಮಸ್ಯೆಯನ್ನು ಬಗೆಹರಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದೆ. ಒಂದು ವೇಳೆ ಸರಕಾರ ಒಂದು ತಿಂಗಳ ಒಳಗಾಗಿ ಕ್ರಿಯಾ ಯೋಜನೆಯ ವರದಿಯನ್ನು ಒಪ್ಪಿಸದೆ ಹೋದರೆ ರಾಜ್ಯ ಸರಕಾರದ ಇಲಾಖೆಗಳ, ನಗರಪಾಲಿಕೆ, ನಗರ ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ಗಳ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೀಠ ಎಚ್ಚರಿಸಿದೆ. ತ್ಯಾಜ್ಯ ವಿಲೇವಾರಿ ಬಗ್ಗೆ ನೀಡಲಾಗಿರುವ ವಿವಿಧ ನಿರ್ದೇಶಗಳ ಬಗ್ಗೆ ರಾಜ್ಯ ಸರಕಾರ ಮತ್ತು ನಗರ ಪಾಲಿಕೆಗಳು ತೋರಿಸುತ್ತಿರುವ ಉದಾಸೀನ ಧೋರಣೆ ಮತ್ತು ನೀರಸ ಪ್ರತಿಕ್ರಿಯೆಯು ದಾಖಲೆಗಳಿಂದ ಸ್ಪಷ್ಟವಾಗುತ್ತದೆ ಎಂದು ನ್ಯಾಯಾಧೀಶ ಎಸ್.ಪಿ. ವಂಗ್ಡಿ ಮತ್ತು ತಜ್ಞ ಸದಸ್ಯ ನಗಿನ್ ನಂದಿ ಆರೋಪಿಸಿದ್ದಾರೆ.

ಘನ ತ್ಯಾಜ್ಯ ಮತ್ತು ಪರಿಸರಕ್ಕೆ ಹಾನಿ ಮಾಡುವಂಥ ಮತ್ತು ಆಮೂಲಕ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವಂಥ ಇತರ ತ್ಯಾಜ್ಯಗಳನ್ನು ವಿಲೇವಾರಿ ಮಾಡುವಲ್ಲಿ ಕೇರಳ ಸರಕಾರ ಮತ್ತು ನಗರ ಪಾಲಿಕೆ ಪ್ರದರ್ಶಿಸುತ್ತಿರುವ ಉದಾಸೀನ ಧೊರಣೆ ಸರಿಯಲ್ಲ ಎಂದು ಹಸಿರು ಪೀಠ ಅಭಿಪ್ರಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News