ನದಿ ನೀರಿನ ಅಂಕಿಅಂಶ ಭಾರತದೊಂದಿಗೆ ಹಂಚಿಕೆ: ಚೀನಾ

Update: 2018-09-01 16:57 GMT

ಬೀಜಿಂಗ್, ಸೆ. 1: ದಕ್ಷಿಣ ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವನ್ನು ಎದುರಿಸಲು ಈಶಾನ್ಯ ಭಾರತದ ಎರಡು ರಾಜ್ಯಗಳು ಸಿದ್ಧಗೊಳ್ಳುತ್ತಿರುವಂತೆಯೇ, ನದಿ ನೀರಿನ ಅಂಕಿಅಂಶಗಳನ್ನು ಭಾರತದೊಂದಿಗೆ ಹಂಚಿಕೊಳ್ಳುವುದನ್ನು ಮುಂದುವರಿಸುವುದಾಗಿ ಚೀನಾ ಶುಕ್ರವಾರ ಹೇಳಿದೆ.

ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ, ಯಾರ್ಲುಂಗ್ ಸಾಂಗ್‌ಪೊ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.

ಈ ನದಿಯನ್ನು ಅರುಣಾಚಲಪ್ರದೇಶದಲ್ಲಿ ಸಿಯಾಂಗ್ ಎಂದು ಕರೆಯಲಾಗುತ್ತಿದೆ ಹಾಗೂ ಅದು ಅಸ್ಸಾಮ್‌ನಲ್ಲಿ ಇತರ ಎರಡು ನದಿಗಳನ್ನು ಸೇರಿಕೊಂಡ ಬಳಿಕ ಬ್ರಹ್ಮಪುತ್ರ ನದಿಯಾಗುತ್ತದೆ.

ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗುವ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ಎಂದು ಚೀನಾ ವಿದೇಶ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News