‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರಕ್ಕೆ ಆ್ಯಕ್ಸಿಡೆಂಟ್!

Update: 2018-09-01 17:02 GMT

ಅನುಪಮ್ ಖೇರ್ ಮುಖ್ಯಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಈ ಚಿತ್ರವನ್ನು ಸದ್ಯ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಬಾಂಬೆ ಹೈಕೋರ್ಟ್ ಸೆನ್ಸಾರ್ ಬೋರ್ಡ್ ಗೆ ನಿರ್ದೇಶಿಸಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನ ಕುರಿತ ಚಿತ್ರ ಇದಾಗಿದೆ. ಈ ವರ್ಷದ ಡಿಸೆಂಬರ್ 21ರಂದು ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಬೊಹ್ರಾ ಬ್ರದರ್ಸ್ ಪ್ರೊಡಕ್ಷನ್ ಲಿ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಅದರ ಕೆಲಸಗಳನ್ನು ಸ್ಥಗಿತಗೊಳಿಸಬೇಕು ಎಂದು ಅಂಧೇರಿ ಮೂಲದ ಜೈನ್ ಎಂಟರ್ ಟೈನ್ ಮೆಂಟ್ ನೆಟ್ ವರ್ಕ್ ಲಿ. ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

“ನನ್ನ ಗ್ರಾಹಕರು ಬೋಹ್ರಾ ಬ್ರದರ್ಸ್ ಸಂಸ್ಥೆಗೆ ಕೋಟ್ಯಾಂತರ ರೂ. ಸಾಲ ನೀಡಿದ್ದಾರೆ. ಅವರಿಗೆ ಸಾಕಷ್ಟು ಸಮಾಯಾವಕಾಶ ನೀಡಿದ ನಂತರವೂ ಅವರು ಸಾಲವನ್ನು ಹಿಂದಿರುಗಿಸಿಲ್ಲ” ಎಂದು ಜೈನ್ ಎಂಟರ್ ಟೈನ್ ಮೆಂಟ್ ನೆಟ್ ವರ್ಕ್ ನ ಹಿರಿಯ ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ. ಈ ವಿವಾದ ಬಗೆಹರಿಯದೆ ಚಿತ್ರ ಬಿಡುಗಡೆ ಕಷ್ಟಸಾಧ್ಯ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News