ಗಾಂಧೀಜಿ ಹತ್ಯೆಯನ್ನು ಸಂಭ್ರಮಿಸಿದವರು ಇಂದು ಅಧಿಕಾರದಲ್ಲಿದ್ದಾರೆ: ನಟಿ ಸ್ವರಾ ಭಾಸ್ಕರ್

Update: 2018-09-03 07:41 GMT

ಮುಂಬೈ, ಸೆ.2: ಮಾವೋವಾದಿಗಳ ಜೊತೆ ಸಂಪರ್ಕ ಇದೆ ಎಂಬ ಆರೋಪದಲ್ಲಿ ಬಂಧಿತರಾಗಿರುವ ಮಾನವ ಹಕ್ಕು ಹೋರಾಟಗಾರರ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಸ್ವರ ಭಾಸ್ಕರ್, ನಗರ ನಕ್ಸಲರು ಎಂಬ ಕಲ್ಪನೆಯೇ ತಮಾಷೆಯಾಗಿದೆ. ಜನರು ತಪ್ಪು ಮಾಡಿದರೆ ನೀವು ಅವರನ್ನು ಶಿಕ್ಷಿಸಬಹುದು. ಆದರೆ ಅವರು ಯೋಚಿಸಿದ ಮಾತ್ರಕ್ಕೆ ಶಿಕ್ಷಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಜೈಲುಗಳೆಲ್ಲ ಯೋಚಿಸುವ ಜನರಿಂದಲೇ ತುಂಬಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ದೇಶದಲ್ಲಿ ಮಹಾತ್ಮಾ ಗಾಂಧಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಯಿತು. ಆ ಸಮಯದಲ್ಲಿ ಹಲವರು ಇದನ್ನು ಸಂಭ್ರಮಿಸಿದ್ದರು. ಅವರೀಗ ಅಧಿಕಾರದಲ್ಲಿದ್ದಾರೆ. ಹಾಗಾದರೆ ಅವರನ್ನು ಜೈಲಿಗೆ ಹಾಕಬೇಕೇ?” ಎಂದು ಸ್ವರಾ ಪ್ರಶ್ನಿಸಿದ್ದಾರೆ.

“ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣದಲ್ಲಿ ಸರಕಾರ ಹೆಚ್ಚೇನೂ ಮಾಡದಿರುವ ಬಗ್ಗೆ ನನಗೆ ಆಶ್ಚರ್ಯವಾಗುತ್ತದೆ. ಇವರು ಬ್ಯಾಂಕ್‌ಗಳಿಗೆ ಸಾವಿರ ಕೋಟಿ ರೂ. ಹಣವನ್ನು ವಂಚಿಸಿದ್ದಾರೆ ಮತ್ತು ಭಾರತೀಯ ಜೈಲುಗಳು ಸರಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ, ಕಡುಬಡವ ಮತ್ತು ಸೀಮಿತಗೊಳಿಸಲ್ಪಟ್ಟ ಜನರ ಪರವಾಗಿ ಹೋರಾಡುವ ಐದು ಮಂದಿಯನ್ನು ಪೊಲೀಸರು ಬಂಧಿಸುತ್ತಾರೆ. ಅವರು ನಿಜವಾಗಿ ಹಿಂಸಾಚಾರ ನಡೆದ ಸ್ಥಳದಲ್ಲಿ ಇರಲಿಲ್ಲ. ಆದರೆ ಭೀಮಾ ಕೋರೆಗಾಂವ್ ಹಿಂಸಾಚಾರದ ವೇಳೆ ಅಲ್ಲಿ ಹಾಜರಿದ್ದ ಸಂಭಾಜಿ ಭಿಡೆ ಮತ್ತಿತರರು ಈಗಲೂ ಆರಾಮವಾಗಿ ತಿರುಗಾಡುತ್ತಿದ್ದಾರೆ. ಪೊಲೀಸರು ತಮ್ಮ ಕರ್ತವ್ಯವನ್ನು ಮಾಡಬೇಕಿದೆ. ಇದು ವಿಚಿತ್ರ” ಎಂದು ಸ್ವರ ಭಾಸ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News