ಏಕಕಾಲದಲ್ಲಿ ಚುನಾವಣೆ ನಡೆಸಲು ಇವಿಎಂ ಖರೀದಿಗೆ 4,555 ಕೋ. ರೂ. ಅಗತ್ಯ

Update: 2018-09-03 14:56 GMT

ಹೊಸದಿಲ್ಲಿ, ಸೆ. 3: ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ನೂತನ ಇವಿಎಂ ಹಾಗೂ ವಿವಿ ಪ್ಯಾಟ್ ಖರೀದಿಗೆ ಸುಮಾರು 4,500 ಕೋ. ರೂ. ಅಗತ್ಯತೆ ಇದೆ ಎಂದು ಕಾನೂನು ಆಯೋಗ ಹೇಳಿದೆ.

ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಕಾನೂನು ಆಯೋಗ ತನ್ನ ಕರಡು ವರದಿಯಲ್ಲಿ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 10,60,000 ಮತಗಟ್ಟೆಗಳನ್ನು ಸಿದ್ಧಗೊಳಿಸಲಾಗುವುದು ಎಂಬ ಚುನಾವಣಾ ಆಯೋಗದ ಹೇಳಿಕೆಯನ್ನು ಉಲ್ಲೇಖಿಸಿದೆ.

‘‘ಏಕಕಾಲದಲ್ಲಿ ಚುನಾವಣೆ ನಡೆಸಿದರೆ, 12.9 ಲಕ್ಷ ಬ್ಯಾಲೆಟ್ ಯೂನಿಟ್, 9.4 ಲಕ್ಷ ಕಂಟ್ರೋಲ್ ಯೂನಿಟ್ ಹಾಗೂ 12.3 ಲಕ್ಷ ವಿವಿಪ್ಯಾಟ್‌‌ಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ’’ ಎಂದು ವರದಿಯಲ್ಲಿ ಹೇಳಲಾಗಿದೆ.

ಇದರ ಪ್ರಕಾರ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿವಿಪ್ಯಾಟ್‌ಗಳನ್ನು ಒಳಗೊಂಡಿದೆ.

   

ಇವಿಎಂಗಳ ಸರಾಸರಿ ಆಯುಷ್ಯ 15 ವರ್ಷಗಳು ಎಂಬುದನ್ನು ಗಮನದಲ್ಲಿ ಇರಿಸಿದರೆ, ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಇವಿಎಂಗಳನ್ನು ಖರೀದಿಸಲು 2024ರಲ್ಲಿ 1751.17 ಕೋ. ರೂ., 2029ರಲ್ಲಿ 2017.93 ಕೋ. ರೂ. ಹಾಗೂ 2034ರಲ್ಲಿ 13,981.58 ಕೋ. ರೂ. ಅಗತ್ಯತೆ ಇದೆ ಎಂದು ಅದು ಹೇಳಿದೆ. ಪ್ರಸ್ತುತ ದರದ ಆಧಾರದಲ್ಲಿ ಈ ವೆಚ್ಚವನ್ನು ಲೆಕ್ಕ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News