ಗಿಡನೆಡುವ ಬೃಹತ್ ಅಭಿಯಾನಕ್ಕೆ ಇಮ್ರಾನ್‌ಖಾನ್ ಚಾಲನೆ

Update: 2018-09-03 16:58 GMT

ಇಸ್ಲಾಮಾಬಾದ್, ಸೆ.3: ಮುಂದಿನ ಐದು ವರ್ಷಗಳಲ್ಲಿ ಪಾಕಿಸ್ತಾನದಾದ್ಯಂತ 1 ಸಾವಿರ ಕೋಟಿ ಗಿಡಗಳನ್ನು ನೆಡುವ ಬೃಹತ್ ಅಭಿಯಾನಕ್ಕೆ ಪ್ರಧಾನಿ ಇಮ್ರಾನ್‌ಖಾನ್ ರವಿವಾರ ಚಾಲನೆ ನೀಡಿದ್ದಾರೆ.

ಇಸ್ಲಾಮಾಬಾದ್ ಸಮೀಪದ ಹರಿಪುರ್‌ನಲ್ಲಿ ಗಿಡವೊದನ್ನು ನೀಡುವ ಮೂಲಕ ಇಮ್ರಾನ್ ಖಾನ್ ಅವರು ಪಾಕಿಸ್ತಾನವನ್ನು ಹಸಿರುಮಯ ಹಾಗೂ ಪರಿಸರ ಸ್ನೇಹಿಯಾಗಿ ಮಾಡುವ ಧ್ಯೇಯವನ್ನು ಹೊಂದಿರುವ ‘ಪ್ಲಾಂಟ್4 ಪಾಕಿಸ್ತಾನ್’ ಅಭಿಯಾನವನ್ನು ಉದ್ಘಾಟಿಸಿದರು.

  ಈ ಬಗ್ಗೆ ಟ್ವಿಟರ್‌ನಲ್ಲಿ ಸಂದೇಶವನ್ನು ನೀಡಿರುವ ಅವರು, ‘‘ಮುಂದಿನ ತಲೆಮಾರುಗಳಿಗಾಗಿ, ಹವಾಮಾನ ಬದಲಾವಣೆ ಹಾಗೂ ಪರಿಸರ ಮಾಲಿನ್ಯವನ್ನು ತಡೆಯಲು ಪ್ರತಿಯೊಬ್ಬರೂ ಹಸಿರು ಪಾಕಿಸ್ತಾನ್ ಅಭಿಯಾನದಲ್ಲಿ ಕೈಜೋಡಿಸಬೇಕೆಂದು ನಾನು ಬಯಸುತ್ತೇನೆ’’ ಕರೆ ನೀಡಿದ್ದಾರೆ.

 ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ವೃಕ್ಷಗಳನ್ನು ನೆಡುವ ನಿಟ್ಟಿನಲ್ಲಿ ಸಕಾಲದಲ್ಲಿ ಕ್ರಮಗಳನ್ನು ಕೈಗೊಳ್ಳದೆ ಇದ್ದಲ್ಲಿ ಪಾಕಿಸ್ತಾನವು ಮರುಭೂಮಿಯಾಗಲಿದೆ ಎಂದವರು ಎಚ್ಚರಿಕೆ ನೀಡಿದರು. ಈ ಅಭಿಯಾನದಡಿ ಮೊದಲೇ ದಿನವೇ 10.5 ಲಕ್ಷ ಗಿಡಗಳನ್ನು ನೆಡಲಾಗಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News