ದೇವಾಲಯದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ : ಸ್ವಘೋಷಿತ ದೇವಮಾನವನ ಬಂಧನ

Update: 2018-09-03 17:01 GMT

ಹೊಸದಿಲ್ಲಿ, ಸೆ. 3: ದಕ್ಷಿಣ ದಿಲ್ಲಿಯ ಫತೇಪುರ ಬೇರಿಯ ದೇವಾಲಯವೊಂದರಲ್ಲಿ ಸ್ವಘೋಷಿತ ದೇವಮಾನವನೋರ್ವ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವರದಿಯಾಗಿದೆ.

ಮಹಿಳೆಯೋರ್ವರು ತನ್ನ ಪುತ್ರ ಹಾಗೂ ಸೋದರ ಸೊಸೆಯೊಂದಿಗೆ ಆಗಸ್ಟ್ 17ರಂದು ದೇವಾಲಯಕ್ಕೆ ಆಗಮಿಸಿದ ಸಂದರ್ಭ ಈ ಘಟನೆ ನಡೆದಿದೆ. ಪುತ್ರನ ಅನಾರೋಗ್ಯದ ಹಿನ್ನಲೆಯಲ್ಲಿ ಅವರು ಸ್ವಘೋಷಿತ ದೇವ ಮಾನವ ನಬ್ಬಾ ಭಗತ್ (42) ಅವರಲ್ಲಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಸೊಸೆಗೆ ಸ್ವಘೋಷಿತ ದೇವ ಮಾನವ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ ಆತ ಬೆದರಿಕೆ ಒಡ್ಡಿದ್ದಾನೆ ಎಂದು ಬಾಲಕಿಯ ಸಂಬಂಧಿಕರು ಆರೋಪಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ವಿಜಯ್ ಕುಮಾರ್ ಹೇಳಿದ್ದಾರೆ.

ಬಾಲಕಿಯ ಸಂಬಂಧಿಕರು ದಾಖಲಿಸಿದ ದೂರಿನ ಆಧಾರದಲ್ಲಿ ಆಗಸ್ಟ್ 30ರಂದು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ, ಭಗತ್ ಅವರನ್ನು ದೇವಾಲಯದಿಂದ ರವಿವಾರ ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News