ಲಿಬಿಯ: ಜೈಲಿನಲ್ಲಿ ದೊಂಬಿ; 400ಕ್ಕೂ ಅಧಿಕ ಕೈದಿಗಳ ಪರಾರಿ

Update: 2018-09-03 17:06 GMT

ಟ್ರಿಪೋಲಿ,ಸೆ.3: ಲಿಬಿಯದ ರಾಜಧಾನಿ ಟ್ರಿಪೋಲಿಯ ದಕ್ಷಿಣ ಉಪನಗರ ಪ್ರದೇಶದಲ್ಲಿರುವ ಕಾರಾಗೃಹವೊಂದರಲ್ಲಿ ರವಿವಾರ ಭಾರೀ ದೊಂಬಿ ನಡೆದ ಬಳಿಕ 400ಕ್ಕೂ ಅಧಿಕ ಕೈದಿಗಳು ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಐನ್ ಝಾರಾ ಪಟ್ಟಣದಲ್ಲಿರುವ ಕಾರಾಗೃಹದ ಸಮೀಪ ಎದುರಾಳಿ ಬಂಡುಕೋರ ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದ ಸಂದರ್ಭದಲ್ಲಿ, ಜೈಲಿನಲ್ಲಿದ್ದ ಬಂಧಿತರು ಬಲವಂತವಾಗಿ ಬಾಗಿಲುಗಳನ್ನು ಒಡೆದು ಪರಾರಿಯಾಗಿದ್ದಾರೆ.

  ಜೈಲಿನ ಕಾವಲುಗಾರರು ಪ್ರಾಣಭಯದಿಂದಾಗಿ ಮಾರಕಾಸ್ತ್ರಗಳನ್ನು ಹೊಂದಿದ್ದ ಕೈದಿಗಳು ಪರಾರಿಯಾಗುವುದನ್ನು ತಡೆಯಲು ಹಿಂಜರಿದರೆಂದು ಪೊಲೀಸರು ಹೇಳಿಕೆ ತಿಳಿಸಿದೆ. ಪರಾರಿಯಾದ ಕೈದಿಗಳಲ್ಲಿ ಹೆಚ್ಚಿನವರು ಲಿಬಿಯದ ಮಾಜಿ ನಿರಂಕುಶಧಿಕಾರಿ ಮುಅಮ್ಮರ್ ಗದ್ದಾಫಿ ಎಂದು ತಿಳಿದುಬಂದಿದೆ.

ಈ ಮಧ್ಯೆ ದಕ್ಷಿಣ ಟ್ರಿಪೋಲಿಯಲ್ಲಿ ರವಿವಾರ ಬಂಡುಕೋರ ಗುಂಪುಗಳು ಭೀಕರ ಸಂಘರ್ಷದಲ್ಲಿ ತೊಡಗಿದ್ದು, ಸೋಮವಾರ ನಿರಾಶ್ರಿತರ ಶಿಬಿರದ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News