ನೋಟು ನಿಷೇಧದಿಂದ ತೆರಿಗೆ ಸಂಗ್ರಹ ಹೆಚ್ಚಳವಾಗಿಲ್ಲ: ಎನ್‌ಡಿಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗ

Update: 2018-09-04 16:38 GMT

ಹೊಸದಿಲ್ಲಿ, ಸೆ. 3: ಅಮಾನ್ಯೀಕರಣಗೊಂಡ ಸೇ. 99 ನೋಟುಗಳು ಬ್ಯಾಂಕ್‌ಗಳಿಗೆ ಹಿಂದೆ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಇತ್ತೀಚೆಗಿನ ಅಂಕಿ-ಅಂಶ ಹೇಳಿದೆ. ಇದು ನೋಟು ಅಮಾನ್ಯೀಕರಣದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಲು ಕಾರಣವಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ, ನೋಟು ನಿಷೇಧದಿಂದ ಭಾರತದಲ್ಲಿ ತೆರಿಗೆ ಅನುಸರಣೆ ಹೆಚ್ಚಾಗಿದೆ ಎಂದು ಬ್ಲಾಗ್‌ನಲ್ಲಿ ವಾದಿಸಿದ್ದಾರೆ. ತೆರಿಗೆ ಸಂಗ್ರಹ ಹಾಗೂ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಏರಿಕೆ ಆಗಿರುವುದರ ಬಗ್ಗೆ ಇತರ ಅಂಕಿ-ಅಂಶಗಳನ್ನು ಅವರು ಉಲ್ಲೇಖಿಸಿದ್ದಾರೆ.

ಹಣಕಾಸು ಸಚಿವರ ಪ್ರತಿಪಾದನೆಯಂತೆ ನೋಟು ನಿಷೇಧದ ಬಳಿಕ ತೆರಿಗೆ ಸಂಗ್ರಹ ಹಾಗೂ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಹೆಚ್ಚಳವಾಗದಿ ರುವುದನ್ನು ಎನ್‌ಡಿಟಿವಿ ರಿಯಾಲಿಟಿ ಚೆಕ್ ಗುರುತಿಸಿದೆ.

ತೆರಿಗೆ ಹೆಚ್ಚಳದ ಬಗ್ಗೆ ಮಾತ್ರ ಗಮನ ಹರಿಸಬೇಕಿತ್ತು. ಕಳೆದ ಒಂದು ವರ್ಷ ತೆರಿಗೆ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ಹಣಕಾಸು ಸಚಿವರು ಹೇಳಿರುವುದಕ್ಕಿಂತ ಮೀರಿ ನೀವು ಚಿಂತಿಸಬೇಕು ಎಂದು ನಾನು ಬಯಸುತ್ತೇನೆ. ಯಾಕೆಂದರೆ, ಇದು ಅವರು ಕೇವಲ ಬ್ಲಾಗ್‌ನಲ್ಲಿ ಬರೆದಿರುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News