ಒಮನ್: ಶಿಕ್ಷಕರು ಖಾಸಗಿ ಪಾಠ ಹೇಳಿದರೆ ಕಠಿಣ ಕ್ರಮ

Update: 2018-09-04 16:42 GMT

ಮಸ್ಕತ್, ಸೆ. 4: ವಿದ್ಯಾರ್ಥಿಗಳಿಗೆ ಖಾಸಗಿ ಪಾಠಗಳನ್ನು ಹೇಳಿಕೊಡದಂತೆ ಒಮನ್‌ನಲ್ಲಿರುವ ಭಾರತೀಯ ಶಾಲೆಗಳ ಶಿಕ್ಷಕರಿಗೆ ಸೂಚಿಸಲಾಗಿದೆ. ಖಾಸಗಿ ತರಗತಿಗಳನ್ನು ತೆಗೆದುಕೊಳ್ಳುವುದು ಪತ್ತೆಯಾದರೆ ಶಿಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

‘‘ಶಿಕ್ಷಕರು ಖಾಸಗಿ ತರಗತಿಗಳನ್ನು ತೆಗೆದುಕೊಳ್ಳುವುದು ಭಾರತೀಯ ಶಾಲೆಗಳ ಘನತೆಯನ್ನು ಕುಂದಿಸುತ್ತದೆ. ಖಾಸಗಿ ತರಗತಿಗಳನ್ನು ನಡೆಸುವುದು ಒಮನ್ ಮತ್ತು ಭಾರರ- ಎರಡೂ ದೇಶಗಳಲ್ಲಿ ಕಾನೂನುಬಾಹಿರವಾಗಿದೆ’’ ಎಂದು ಒಮನ್‌ನ ಶಿಕ್ಷಣ ಸಲಹಾಕಾರ ಎಂ.ಪಿ. ವಿನೋಬ ಒಮನ್‌ನಲ್ಲಿರುವ ಭಾರತೀಯ ಶಾಲೆಗಳ ಪ್ರಾಂಶುಪಾಲರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

 ಖಾಸಗಿ ಪಾಠಗಳನ್ನು ಹೇಳುವ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಾಗೂ ದೈಹಿಕ ಶಿಕ್ಷಣ, ಲಲಿತ ಕಲೆಗಳು, ನೃತ್ಯ ಮತ್ತು ಸಂಗೀತ ಸೇರಿದಂತೆ ಕಿಂಡರ್‌ಗಾರ್ಟನ್‌ನಿಂದ ಹನ್ನೆರಡನೇ ತರಗತಿವರೆಗೆ ತಮ್ಮ ಶಾಲೆಗಳ ಶಿಕ್ಷಕರು ನಡೆಸುವ ಖಾಸಗಿ ತರಗತಿಗಳನ್ನು ಮುಚ್ಚುವಂತೆ ಅವರು ಪ್ರಾಂಶುಪಾಲರನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News