ಅಂತಾರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣದಲ್ಲಿ ರಂಧ್ರ

Update: 2018-09-04 16:54 GMT

ಮಾಸ್ಕೋ, ಸೆ. 4: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ವಾರ ಕಾಣಿಸಿಕೊಂಡಿರುವ ವಾಯು ಸೋರಿಕೆಯು ಉದ್ದೇಶಪೂರ್ವಕ ಬುಡಮೇಲು ಕೃತ್ಯವಾಗಿರಬಹುದಾಗಿದೆ ಎಂಬ ಸಂದೇಹವನ್ನು ರಶ್ಯದ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೊಗೊಝಿನ್ ವ್ಯಕ್ತಪಡಿಸಿದ್ದಾರೆ.

 ಈ ಹಿನ್ನೆಲೆಯಲ್ಲಿ, ರಶ್ಯ ತಪಾಸಣೆಗಳನ್ನು ಆರಂಭಿಸಿದೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿರುವ ರಶ್ಯ ಬಾಹ್ಯಾಕಾಶ ನೌಕೆಯೊಂದರಲ್ಲಿ ಗುರುವಾರ ಪತ್ತೆಹಚ್ಚಲಾಗಿರುವ ರಂಧ್ರವನ್ನು ಕೊರೆಯಲಾಗಿತ್ತು ಹಾಗೂ ಅದನ್ನು ಉದ್ದೇಶಪೂರ್ವಕವಾಗಿ ಮಾಡಿರಬಹುದಾಗಿದೆ ಎಂದು ಡಿಮಿಟ್ರಿ ರೊಗೊಝಿನ್ ಹೇಳಿದ್ದಾರೆ.

ಈ ರಂಧ್ರವನ್ನು ಭೂಮಿಯಲ್ಲಿ ಅಥವಾ ಬಾಹ್ಯಾಕಾಶದಲ್ಲಿ ಕೊರೆದಿರಬಹುದು ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ರಂಧ್ರವು ಒತ್ತಡವನ್ನು ಕಡಿಮೆ ಮಾಡಿದ ಬಳಿಕ, ಗಗನಯಾನಿಗಳು ರಂಧ್ರವನ್ನು ಟೇಪ್ ಬಳಸಿ ಮುಚ್ಚಿದರು.

‘‘ರಂಧ್ರ ಕೊರೆಯಲು ಹಲವು ಪ್ರಯತ್ನಗಳನ್ನು ಮಾಡಲಾಗಿತ್ತು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News