ಡುಟರ್ಟ್ ಟೀಕಾಕಾರನ ವಿರುದ್ಧದ ಕ್ಷಮಾದಾನ ರದ್ದು

Update: 2018-09-04 17:01 GMT

ಮನಿಲಾ (ಫಿಲಿಪ್ಪೀನ್ಸ್), ಸೆ. 4: 15 ವರ್ಷಗಳ ಹಿಂದೆ ನಡೆದ ವಿಫಲ ಕ್ರಾಂತಿಯಲ್ಲಿ ಶಾಮೀಲಾಗಿದ್ದ ಪ್ರತಿಪಕ್ಷ ಸೆನೆಟರ್ ಒಬ್ಬರಿಗೆ ನೀಡಲಾಗಿದ್ದ ಕ್ಷಮಾದಾನವನ್ನು ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಮಂಗಳವಾರ ಹಿಂದಕ್ಕೆ ಪಡೆದುಕೊಂಡಿದ್ದಾರೆ ಹಾಗೂ ಅವರನ್ನು ಬಂಧಿಸುವಂತೆ ಆದೇಶ ನೀಡಿದ್ದಾರೆ.

ಸೆನೆಟರ್ ಆಂಟೋನಿಯೊ ಟ್ರಿಲನ್ಸ್, ಡುಟರ್ಟ್‌ರ ಅತ್ಯಂತ ತೀಕ್ಷ್ಣ ಟೀಕಾಕಾರರಾಗಿದ್ದಾರೆ. ಡುಟರ್ಟ್ ಅಗಾಧ ಸಂಪತ್ತು ಬಚ್ಚಿಟ್ಟಿದ್ದಾರೆ ಎಂಬುದಾಗಿ ಅವರು ಪದೇ ಪದೇ ಆರೋಪಿಸಿದ್ದಾರೆ ಹಾಗೂ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಡುಟರ್ಟ್ ಸರಕಾರದ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಬೆಂಬಲಿಸಿದ್ದಾರೆ.

ಸಾವಿರಾರು ‘ಕ್ರಿಮಿನಲ್‌ಗಳು ಮತ್ತು ಮಾದಕ ದ್ರವ್ಯ ಮಾರಾಟಗಾರರನ್ನು ಹತ್ಯೆ ಮಾಡಿರುವುದಕ್ಕಾಗಿ’ ಡುಟರ್ಟ್‌ರನ್ನು ದೋಷಾರೋಪಣೆಗೆ ಗುರಿಪಡಿಸಬೇಕೆಂದು ಕೋರಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

‘‘ನನ್ನ ಬಂಧನಕ್ಕೆ ಸರಕಾರ ಹೊರಡಿಸಿರುವ ಆದೇಶ ರಾಜಕೀಯ ಹಿಂಸಾಚಾರದ ಸ್ಪಷ್ಟ ಉದಾಹರಣೆಯಾಗಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಿಲನ್ಸ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News