‘ಮೀಶಾ’ ಕಾದಂಬರಿ ನಿಷೇಧಕ್ಕೆ ಸುಪ್ರೀಂ ಕೋರ್ಟ್ ನಕಾರ

Update: 2018-09-05 10:43 GMT

ಹೊಸದಿಲ್ಲಿ, ಸೆ.5: ಎಸ್.ಹರೀಶ್‍ ಅವರ ‘ಮೀಶಾ’ ಎಂಬ ಕಾದಂಬರಿಯನ್ನುನಿಷೇಧಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟು ತಳ್ಳಿಹಾಕಿದೆ.

ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ನಡೆಸಲಾಗದು ಎಂದು ಕೋರ್ಟ್ ತಿಳಿಸಿದ್ದು, ಸಾಹಿತ್ಯ ಸೃಷ್ಟಿ ಬರಹಗಾರನ ಮೂಲಭೂತ ಹಕ್ಕಾಗಿದೆ. ಆದ್ದರಿಂದ ‘ಮೀಶಾ’ ಕಾದಂಬರಿಯನ್ನು ನಿಷೇಧಿಸಲಾಗದು. ಮಾತ್ರವಲ್ಲ ಕಾದಂಬರಿಯ ಒಂದು ಭಾಗವನ್ನು ಮಾತ್ರ ಓದಿ ಅದರ ಬಗ್ಗೆ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ ಎಂದಿದೆ.

ಮುಖ್ಯ ನ್ಯಾಯಮೂರ್ತಿ ಅಧ್ಯಕ್ಷತೆಯ ಮೂವರು ಸದಸ್ಯರ ಪೀಠ ತೀರ್ಪು ಪ್ರಕಟಿಸಿದ್ದು, ಜಸ್ಟಿಸ್ ಖಾನ್ವಿಲ್ಕರ್, ಡಿವೈ ಚಂದ್ರಚೂಡ ಪೀಠದ ಇತರ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News