ಭಾರತ ಶುಭಾರಂಭ

Update: 2018-09-05 18:39 GMT

ಢಾಕಾ, ಸೆ.5: ಆಶಿಕ್ ಕುರುನಿಯನ್ ಹಾಗೂ ಲಾಲಿಯನ್ಜುವಾ ಚಾಂಗ್ಟೆ ದಾಖಲಿಸಿದ ತಲಾ ಒಂದು ಗೋಲು ನೆರವಿನಿಂದ ಭಾರತ ತಂಡ ಸ್ಯಾಫ್ ಫುಟ್ಬಾಲ್ ಟೂರ್ನಿಯಲ್ಲಿ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 2-0 ಅಂತರದಿಂದ ಸೋಲಿಸಿ ಶುಭಾರಂಭ ಮಾಡಿದೆ. ಇಲ್ಲಿನ ಬಂಗಬಂಧು ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆಶಿಕ್ 36ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಶ್ರೀಲಂಕಾದ ಗೋಲುಕೀಪರ್‌ರನ್ನು ವಂಚಿಸಿದ ಆಶೀಕ್ ಮೊದಲ ಅಂತರ್‌ರಾಷ್ಟ್ರೀಯ ಗೋಲು ದಾಖಲಿಸಿದರು.ಯುವ ಆಟಗಾರರನ್ನು ಕಣಕ್ಕಿಳಿಸಿದ್ದ ಭಾರತದ ಪರ ಚಾಂಗ್ಟೆ 47ನೇ ನಿಮಿಷದಲ್ಲಿ ಗೋಲು ಬಾರಿಸಿ 2-0 ಮುನ್ನಡೆ ಒದಗಿಸಿಕೊಟ್ಟರು. ದೀರ್ಘ ಸಮಯದಿಂದ ಗಾಯದ ಸಮಸ್ಯೆ ಎದುರಿಸುತ್ತಿದ್ದ ನಿಖಿಲ್ ಪೂಜಾರಿ ಕಾರ್ನರ್‌ನಿಂದ ಗೋಲು ಬಾರಿಸಲು ಯತ್ನಿಸಿದರು. ಅದು ಗೋಲುಪೆಟ್ಟಿಗೆಯಿಂದ ಹೊರಗೆ ಬಿತ್ತು. ಫಾರೂಖ್ ಚೌಧರಿ ಹಾಗೂ ಬದಲಿ ಆಟಗಾರ ಮನ್ವೀರ್ ಸಿಂಗ್ ಕೂಡ ಆಡುವ ಅವಕಾಶ ಪಡೆದಿದ್ದರು. ಆದರೆ, ಅವರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಭಾರತ ರವಿವಾರ ನಡೆಯಲಿರುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಮಾಲ್ಡೀವ್ಸ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News