ಹೊಟೇಲ್ ಕೋಣೆಯಲ್ಲಿ ಪ್ರಸಿದ್ಧ ನಟಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2018-09-06 09:46 GMT

ಕೊಲ್ಕತ್ತಾ, ಸೆ.6: ಬಂಗಾಳಿ ಟಿವಿ ಮತ್ತು ಸಿನೆಮಾ ನಟಿಯೊಬ್ಬರು ಹೊಟೇಲ್ ಕೋಣೆಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ.

ಮಂಗಳವಾರ ನಟಿ ಹೊಟೇಲ್ ನಲ್ಲಿ ರೂಮ್ ಬುಕ್ ಮಾಡಿದ್ದರು ಎನ್ನಲಾಗಿದೆ. ಅವರು ನಾಳೆ ಹೊಟೇಲ್ ನಿಂದ ತೆರಳಬೇಕಿತ್ತು. ಆದರೆ ಹೊಟೇಲ್ ಸಿಬ್ಬಂದಿ ಬಾಗಿಲು ಬಡಿದರೂ ತೆರೆಯದೇ ಇದ್ದಾಗ ಲಾಕ್ ಮುರಿದು ಒಳಗೆ ಪ್ರವೇಶಿಸಬೇಕಾಯಿತು. ಈ ಸಂದರ್ಭ ನಟಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ವರದಿಯಾಗಿದೆ.

ಮೃತಪಟ್ಟ ನಟಿಯನ್ನು ಪಾಯಲ್ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಹಲವು ಚಿತ್ರಗಳು ಮತ್ತು ಸೀರಿಯಲ್ ಗಳಲ್ಲಿ ಅವರು ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News