ಸಲಿಂಗಕಾಮ ಅಪರಾಧವಲ್ಲ ಎಂಬ ಸುಪ್ರೀಂ ತೀರ್ಪಿಗೆ ಕಾರಣರಾದ ಐವರು ಯಾರು ಗೊತ್ತಾ?

Update: 2018-09-06 13:01 GMT

ಹೊಸದಿಲ್ಲಿ, ಸೆ.6: ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ. ಸಂವಿಧಾನದ ಸೆಕ್ಷನ್ 377 ಅನ್ನು ರದ್ದುಗೊಳಿಸಬೇಕೆಂದು ಅರ್ಜಿ ಸಲ್ಲಿಸಿದವರ ಮಾಹಿತಿ ಇಲ್ಲಿದೆ.

1. ನವತೇಜ್ ಸಿಂಗ್ ಜೋಹರ್ (59) ಓರ್ವ ಖ್ಯಾತ ಶಾಸ್ತ್ರೀಯ ನೃತ್ಯಪಟುವಾಗಿದ್ದಾರೆ ಹಾಗೂ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ವಿಜೇತರೂ ಆಗಿದ್ದಾರೆ. ತಮ್ಮ 25 ವರ್ಷಗಳ ಸಂಗಾತಿ ಜತೆ ಅಪೀಲು ಸಲ್ಲಿಸಿದ ಅವರು ಸೆಕ್ಷನ್ 377 ಸಂವಿಧಾನ ನೀಡುವ ಜೀವಿಸುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಿರುವುದರಿಂದ ಅದನ್ನು ರದ್ದುಪಡಿಸುವಂತೆ ಕೋರಿದ್ದಾರೆ. ಅವರು ಅಶೋಕ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

2. ಸುನಿಲ್ ಮೆಹ್ರಾ ಅವರು ಪತ್ರಕರ್ತರೂ, ಮ್ಯಾಕ್ಸಿಂ ಮ್ಯಾಗಝಿನ್ ನ ಭಾರತೀಯ ಅವೃತ್ತಿಯ ಮಾಜಿ ಸಂಪಾದಕರೂ ಆಗಿದ್ದಾರೆ.  ಅವರು ನಟ ಹಾಗೂ 13ನೇ ಶತಮಾನದ ಕಥಾ ನಿರೂಪಣಾ ಶೈಲಿ ದಸ್ತಾಂಗೋಯಿ ಇದನ್ನು  ಜಗತ್ತಿಗೆ ಪರಿಚಯಿಸಿದವರೂ ಆಗಿದ್ದಾರೆ. ತಮ್ಮ ಸಂಗಾತಿ ನವತೇಜ್ ಸಿಂಗ್ ಜೋಹರ್ ಜತೆ ಅವರು ಸ್ಟುಡಿಯೋ ಅಭ್ಯಾಸ್ ಆರಂಭಿಸಿದ್ದಾರೆ.

3. ರಿತು ದಾಲ್ಮಿಯಾ (45) ಅವರೊಬ್ಬ ಖ್ಯಾತ ಚೆಫ್ ಹಾಗೂ ದಿವಾ ರೆಸ್ಟಾರೆಂಟ್ ಚೈನ್ ಮಾಲಕಿಯಾಗಿದ್ದಾರೆ. ಕೊಲ್ಕತ್ತಾ ಮೂಲದ ಇವರು ಹಲವಾರು ಕೃತಿಗಳನ್ನೂ ಬರೆದಿದ್ದಾರೆ.

4. ಅಮನ್ ನಾಥ್ (61) ಅವರು ನೀಮ್ರಾನ  ಹೋಟೆಲ್ ಸಮೂಹದ  ಮಾಲಕರಾಗಿದ್ದು ಇತಿಹಾಸ ಮತ್ತು ಕಲೆಯ ಬಗ್ಗೆ ಹಲವು ಕೃತಿಗಳನ್ನು ಬರೆದಿದ್ದಾರೆ.

5. ಆಯೇಶಾ ಕಪೂರ್ (44) ಅವರು ಆಹಾರ ಮತ್ತು ಪಾನೀಯ ತಯಾರಿಕಾ ಕ್ಷೇತ್ರದ ಉದ್ಯಮಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News