ಭಾರತದ ಜೊತೆಗಿನ ಉದ್ವಿಗ್ನತೆ ಶಮನಕ್ಕೆ ನೆರವಾಗಿ: ಅಮೆರಿಕಕ್ಕೆ ಪಾಕ್ ಮನವಿ

Update: 2018-09-06 16:46 GMT

ಇಸ್ಲಾಮಾಬಾದ್, ಸೆ.6: ಭಾರತದ ಜೊತೆಗಿನ ಉದ್ವಿಗ್ನತೆಯನ್ನು ಶಮನಗೊಳಿಸಲು ತನಗೆ ನೆರವಾಗುವಂತೆ ಪಾಕಿಸ್ತಾನವು ಅಮೆರಿಕವನ್ನು ಕೋರಿದೆ. ಅಫ್ಘಾನಿಸ್ತಾನದ ಜೊತೆಗಿನ ದೇಶದ ಗಡಿಯ ಬಗ್ಗೆ ಗಮನವನ್ನು ಕೇಂದ್ರೀಕರಿಸುವುದಕ್ಕಾಗಿ ತನಗೆ ಭಾರತದ ಜೊತೆಗಿನ ಪೂರ್ವದ ಗಡಿಯಲ್ಲಿ ಶಾಂತಿಯ ವಾತಾವರಣದ ಅಗತ್ಯವಿದೆಯೆಂದು ಅದು ಹೇಳಿದೆ.

 ಪಾಕ್ ವಿದೇಶ ಸಚಿವ ಶಾ ಮುಹಮ್ಮದ್ ಖುರೈಷಿ ಪಾಕ್ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪ್ಯಾಂಪಿಯೊ ಜೊತೆಗೆ ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರಿಗೆ ಜೊತೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.

ಗಡಿನಿಯಂತ್ರಣ ರೇಖೆಯಲ್ಲಿನ ಕದನವಿರಾಮ ಉಲ್ಲಂಘನೆಗಳಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದವರು ಹೇಳಿದರು.

‘‘ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಶಾಂತಿಯಿಂದರಲು ಪಾಕ್ ಬಯಸುತ್ತಿದೆಯೆಂದವರು ಪುನರುಚ್ಚರಿಸಿದರು. ಆದರೆ  ಚಪ್ಪಾಳೆಗೆ ಎರಡೂ ಕೈಗಳ ಅಗತ್ಯವಿದೆ’’  ಎಂದವರು ಸೂಚ್ಯವಾಗಿ ಭಾರತವನ್ನುದ್ದೇಶಿಸಿ ಹೇಳಿದರು.

ಅಫ್ಘಾನಿಸ್ತಾನದ ತಾಲಿಬಾನ್ ಬಂಡುಕೋರರ ಜೊತೆಗೆ ನೇರ ಮಾತುಕತೆಗೆ ಸಿದ್ಧವಿರುವುದಾಗಿ ಪಾಕ್ ಭೇಟಿಯಲ್ಲಿರುವ ಅಮೆರಿಕ ನಿಯೋಗವು ತನಗೆ ತಿಳಿಸಿರುವುದಾಗಿ ಖುರೇಷಿ ತಿಳಿಸಿದರು. ಸಂಧಾನದ ಮೂಲಕ ಅಫ್ಘಾನ್ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ತನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ನಿಯೋಗಕ್ಕೆ ಪಾಕ್ ತಿಳಿಸಿರುವುದಾಗಿ ಖುರ್ಷಿದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News