ಸದ್ದಿಲ್ಲದೆ ಬಿಡುಗಡೆಯಾಯ್ತು ರಜಿನಿಕಾಂತ್ ಹೊಸ ಚಿತ್ರದ ಫಸ್ಟ್ ಲುಕ್

Update: 2018-09-07 13:49 GMT

ಚೆನ್ನೈ, ಸೆ.7: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಈ ಹಿಂದಿನ ಸಿನೆಮಾ ಸಂಪ್ರದಾಯಗಳನ್ನು ಮುರಿಯುವಂತೆ ಇಂದು ಅವರು ನಟಿಸಿರುವ ಹೊಸ ಚಿತ್ರವಾದ ‘ಪೆಟ್ಟಾ’ದ ಫಸ್ಟ್ ಲುಕ್ ಪೋಸ್ಟರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಕಲರ್ ಫುಲ್ ಆಗಿರುವ ಫಸ್ಟ್ ಲುಕ್ ಪೋಸ್ಟರ್ ಮತ್ತು ಅನಿರುದ್ಧ್ ಅವರ ಹಿನ್ನೆಲೆ ಸಂಗೀತವನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಕೆಲದಿನಗಳಲ್ಲೇ ರಜಿನಿಕಾಂತ್ ನಟನೆಯ, ಶಂಕರ್ ನಿರ್ದೇಶನದ 2.0 ಚಿತ್ರ ಬಿಡುಗಡೆಯಾಗಲಿದೆ.

ರಜಿನಿಕಾಂತ್ ಅವರ ಕಬಾಲಿ ಮತ್ತು ಕಾಲಾ ಚಿತ್ರಗಳನ್ನು ಪಾ ರಂಜಿತ್ ನಿರ್ದೇಶಿಸಿದ್ದರು. ವಿಶೇಷವೆಂದರೆ ಈ ಬಾರಿ ರಜಿನಿಕಾಂತ್ ಕಮರ್ಶಿಯಲ್ ನಿರ್ದೇಶಕರನ್ನು ಕೈಬಿಟ್ಟು ‘ಪಿಝ್ಝಾ’, ‘ಇರೈವಿ’, ಮರ್ಕ್ಯುರಿ’ ಖ್ಯಾತಿಯ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಕಮರ್ಶಿಯಲ್ ನಿರ್ದೇಶಕನಾಗಿದ್ದರೂ ಪ್ರಯೋಗಾತ್ಮಕ ಸಿನೆಮಾಗಳಿಗೆ ಅವರು ಹೆಸರುವಾಸಿ. ‘ಪೆಟ್ಟಾ’ ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್ ವಿಜಯ್ ಸೇತುಪತಿ, ನವಾಝುದ್ದೀನ್ ಸಿದ್ದಿಕಿ, ಸಿಮ್ರಾನ್, ತ್ರಿಶಾ, ಬಾಬ್ಬಿ ಸಿಂಹ ಮೊದಲಾದವರು ನಟಿಸಲಿದ್ದಾರೆ ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News