ಹಸಿರುಮನೆ ಅನಿಲ ಸೂಸುವಿಕೆ ತಗ್ಗಿಸಲು ಭಾರತ ಮತ್ತು ಫ್ರಾನ್ಸ್ ನಡುವೆ ಒಪ್ಪಂದ

Update: 2018-09-07 14:35 GMT

ಹೊಸದಿಲ್ಲಿ,ಸೆ.7: ಪ್ರಾಯೋಗಿಕವಾಗಿ ನಾಗ್ಪುರ,ಕೊಚ್ಚಿ ಮತ್ತು ಅಹ್ಮದಾಬಾದ್ ನಗರಗಳಲ್ಲಿ ನಗರ ಸಾರಿಗೆಯಲ್ಲಿನ ಹಸಿರುಮನೆ ಅನಿಲ(ಜಿಎಚ್‌ಜಿ) ಹೊರಸೂಸುವಿಕೆಯನ್ನು ತಗ್ಗಿಸಲು ನೆರವು ಒದಗಿಸಲು ಭಾರತ ಮತ್ತು ಫ್ರಾನ್ಸ್ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

ಈ ಒಪ್ಪಂದದಂತೆ ‘ಮೊಬಿಲೈಸ್ ಯುವರ್ ಸಿಟಿ(ಎಂವೈಸಿ)’ ಕಾರ್ಯಕ್ರಮದಡಿ ಭಾರತೀಯ ನಗರಗಳು ತಮ್ಮ ಜಿಎಚ್‌ಜಿ ಹೊರಸೂಸುವಿಕೆಯನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಸುಸ್ಥಿರ ಸಾರಿಗೆ ನೀತಿಯನ್ನು ಸಾಧಿಸಲು ಐರೋಪ್ಯ ಒಕ್ಕೂಟವು 3.5 ಮಿಲಿಯನ್ ಯುರೋಗಳನ್ನು ಒದಗಿಸಲಿದೆ. ಗುರುವಾರ ಸಂಜೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ ಸಿಂಗ್ ಪುರಿ ಮತ್ತು ಭಾರತದಲ್ಲಿ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡರ್ ಝೀಗ್ಲರ್ ಅವರ ಉಪಸ್ಥಿತಿಯಲ್ಲಿ ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿಗಳನ್ನು ಹಾಕಿದರು.

ಫ್ರಾನ್ಸ್‌ನ ಎಎಫ್‌ಡಿಯು 2015ರಲ್ಲಿ ಸಲ್ಲಿಸಿದ್ದ ಪ್ರಸ್ತಾವದ ಆಧಾರದಲ್ಲಿ ಭಾರತದಲ್ಲಿ ಎಂವೈಸಿ ಅಡಿ ನಿರ್ದಿಷ್ಟ ಹೂಡಿಕೆಗಳು ಮತ್ತು ತಾಂತ್ರಿಕ ನೆರವು ನೀಡಲು ಎಎಫ್‌ಡಿ ಮೂಲಕ 3.5 ಮಿಲಿಯನ್ ಯುರೋಗಳನ್ನು ಒದಗಿಸಲು ಐರೋಪ್ಯ ಒಕ್ಕೂಟವು ಒಪ್ಪಿಕೊಂಡಿದೆ ಎಂದು ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News