ಗುಂಡು ಹಾರಿಸಿಕೊಂಡು ಕರ್ತವ್ಯದಲ್ಲಿದ್ದ ಸೈನಿಕ ಆತ್ಮಹತ್ಯೆ

Update: 2018-09-09 09:28 GMT

ಕಾಶ್ಮೀರ, ಸೆ.9: ಇಲ್ಲಿನ ಸಾಂಬಾ ಜಿಲ್ಲೆಯಲ್ಲಿ ಸೈನಿಕರೊಬ್ಬರು ತನ್ನ ಸರ್ವಿಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಪಂಜಾಬ್ ರೆಜಿಮೆಂಟ್ ನ ನಾಯ್ಕ್ ಜಸ್ವೀರ್ ಸಿಂಗ್ (34) ಆತ್ಮಹತ್ಯೆಗೆ ಶರಣಾಗಿರುವ ಸೈನಿಕ. ಗುಂಡಿನ ಸದ್ದು ಕೇಳಿ ಇತರ ಸೈನಿಕರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರು ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News