ಫೇಸ್‌ಬುಕ್‌ನಿಂದ ದುಡ್ಡು ಗಳಿಸಬೇಕೇ? ಇಲ್ಲಿವೆ ಐದು ಸುಲಭ ಮಾರ್ಗಗಳು

Update: 2018-09-09 13:26 GMT

ವಿಶ್ವಾದ್ಯಂತ ಪ್ರತಿದಿನ ಕನಿಷ್ಠ 128 ಕೋಟಿ ಜನರು ಬಳಸುತ್ತಿರುವ ಫೇಸ್‌ಬುಕ್ ಅತ್ಯಂತ ಪ್ರಬಲ ಸಾಮಾಜಿಕ ಮಾಧ್ಯಮವಾಗಿದೆ. ಫೇಸ್‌ಬುಕ್‌ನ ಯಶಸ್ಸಿನಲ್ಲ್ಲಿ ಭಾರತದ ಪಾಲು ದೊಡ್ಡದಿದೆ. ದೇಶದಲ್ಲ್ಲಿ ಫೇಸ್‌ಬುಕ್ ಬಳಕೆದಾರರಲ್ಲಿ 18ರಿಂದ 34 ವರ್ಷ ವಯೋಮಾನದವರ ಸಂಖ್ಯೆ ತುಂಬ ಹೆಚ್ಚಿದೆ. ಇಂತಹ ಫೇಸಬುಕ್‌ನಿಂದ ಬಳಕೆದಾರರು ಹಣವನ್ನು ಗಳಿಸಲು ಹಲವಾರು ಮಾರ್ಗಗಳಿವೆ. ಆದರೆ ಇದರ ಯಶಸ್ಸು ನೆಟ್‌ವರ್ಕ್ ರೀಚ್ ಮತ್ತು ಬಳಕೆದಾರರು ಹಂಚಿಕೊಳ್ಳುವ ಕಂಟೆಂಟ್‌ನಲ್ಲಿ ಅಡಗಿದೆ. ಫೇಸಬುಕ್‌ನಿಂದ ಲಾಭ ಮಾಡಿಕೊಳ್ಳಲು ಐದು ಸರಳ ಮಾರ್ಗಗಳ ಬಗ್ಗೆ ಮಾಹಿತಿಯಿಲ್ಲಿದೆ.

►ಫೇಸ್‌ಬುಕ್ ಇನ್‌ಸ್ಟಂಟ್ ಲೇಖನಗಳು

ಈ ಮಾರ್ಗವು ರಚನಾತ್ಮಕ ಬರವಣಿಗೆ ಕೌಶಲ್ಯವನ್ನು ಹೊಂದಿರುವ ಮತ್ತು ಜನರನ್ನು ಆಕರ್ಷಿಸುವ ಬರವಣಿಗೆ ಮತ್ತು ಪ್ರಕಟಣೆಯ ಸಾಮರ್ಥ್ಯವಿರುವ ಬಳಕೆದಾರರಿಗೆ ಅತ್ಯಂತ ಸೂಕ್ತವಾಗಿದೆ. ಫೇಸಬುಕ್ 2016 ಫೆಬ್ರವರಿಯಿಂದ ತನ್ನ ಇನ್‌ಸ್ಟಂಟ್ ಆರ್ಟಿಕಲ್ಸ್ ವಿಭಾಗವನ್ನು ಪ್ರಕಾಶಕರಿಗೆ ಮುಕ್ತವಾಗಿಸಿದೆ. ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳಲು ಇನ್‌ಸ್ಟಂಟ್ ಆರ್ಟಿಕಲ್ಸ್ ಡಾಟ್ ಎಫ್‌ಬಿ ಡಾಟ್ ಕಾಮ್‌ಗೆ ಲಾಗಿನ್ ಆಗಿ ಸೈನ್ ಅಪ್ ಮಾಡುವುದು ಅಗತ್ಯವಾಗುತ್ತದೆ. ಬಳಿಕ ನಿಮ್ಮ ಫೇಸ್‌ಬುಕ್ ಪುಟವನ್ನು ಆಯ್ಕೆ ಮಾಡಿಕೊಂಡು ಯುಆರ್‌ಎಲ್ ಪಡೆದುಕೊಂಡು ನಿಮ್ಮ ಲೇಖನವನ್ನು ಸೃಷ್ಟಿಸಬಹುದು. ನಿಮ್ಮ ಲೇಖನವು ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಆಕರ್ಷಿಸುತ್ತಿದ್ದರೆ ನಿಮ್ಮ ಪುಟದಲ್ಲಿ ಫೇಸಬುಕ್ ಜಾಹೀರಾತುಗಳನ್ನು ಪ್ರಕಟಿಸುತ್ತದೆ ಮತ್ತು ಆದಾಯವನ್ನು ನಿವ್ಮೊಂದಿಗೆ ಹಂಚಿಕೊಳ್ಳುತ್ತದೆ.

►ಫೇಸ್‌ಬುಕ್ ಕಂಟೆಂಟ್ ಸೃಷ್ಟಿಸಿ

 ಸಾಮಾಜಿಕ ಮಾಧ್ಯಮಗಳ ಇಂದಿನ ಜಗತ್ತಿನಲ್ಲಿ ಕಂಟೆಂಟ್‌ಅಥವಾ ವಿಷಯ ಬಹು ಮುಖ್ಯವಾಗಿದೆ. ಹೊಸ ಕಂಟೆಂಟ್ ಸೃಷ್ಟಿಸುವ ಸಾಮರ್ಥ್ಯ ನಿಮ್ಮಲ್ಲಿದ್ದರೆ ಹಣವನ್ನು ಮಾಡಲು ಸುಲಭವಾದ ದಾರಿಗಳಿವೆ. ಆಡಿಯೊ ಫೈಲ್‌ಗಳು,ಆಸಕ್ತಿಕರ ವೀಡಿಯೊಗಳು,ನಿಮ್ಮ ಪರಿಕಲ್ಪನೆಯನ್ನು ವಿವರಿಸುವ ಪಿಡಿಎಫ್ ಫೈಲ್ ಅಥವಾ ಇತರ ಸರಕುಗಳು ಫೇಸ್‌ಬುಕ್ ಬಳಕೆದಾರರಿಗೆ ಆಸಕ್ತಿಕರವಾಗಬಹುದು. ನಿಮ್ಮ ಕಂಟೆಂಟ್‌ನ್ನು ನಗದೀಕರಿಸಿಕೊಳ್ಳಲು ಹಲವಾರು ಸೈಟ್‌ಗಳಿವೆ. 22ಸೋಷಿಯಲ್ ನೀವು ಬಳಸಿಕೊಳ್ಳಬಹುದಾದ ಇಂತಹ ಸೈಟ್‌ಗಳಲ್ಲೊಂದಾಗಿದೆ. ಇದಕ್ಕಾಗಿ ನೀವು ಫೇಸ್‌ಬುಕ್ ಪೇಜ್,ಫ್ರೀ 22ಸೋಷಿಯಲ್ ಖಾತೆ,ದೃಢೀಕೃತ ಪೇ ಪಾಲ್ ಖಾತೆ ಮತ್ತು ಡ್ರಾಪ್‌ಬಾಕ್ಸ್,ವಿಮೆಕೊ,ಯುಟ್ಯೂಬ್,ಗೂಗಲ್‌ಡ್ರೈವ್ ಮತ್ತು ಸೌಥ್‌ಕ್ಲೌಡ್‌ನಂತಹ ಡಿಜಿಟಲ್ ಹೋಸ್ಟಿಂಗ್‌ನ ಫ್ರೀ ಅಥವಾ ಪೇಡ್ ಖಾತೆಯನ್ನು ಹೊಂದಿರಬೇಕು.

►ಅಫಿಲಿಯೇಟ್ ಮಾರ್ಕೆಟಿಂಗ್

   ಅಫಿಲಿಯೇಟ್ ಮಾರ್ಕೆಟಿಂಗ್ ಫೆಸ್‌ಬುಕ್ ಪೇಜ್ ಅಥವಾ ನಿಮ್ಮ ಕಾಂಟ್ಯಾಕ್ಟ್‌ಗಳ ಗುಂಪುಗಳ ಮೂಲಕ ಯಾವುದೇ ಉತ್ಪನ್ನ,ಬ್ರಾಂಡ್,ಸೇವೆ ಅಥವಾ ಕಂಪನಿಯನ್ನು ಉತ್ತೇಜಿಸುವ ಮೂಲಕ ಹಣವನ್ನು ಗಳಿಸಲು ನಿಮಗೆ ನೆರವಾಗುವ ವ್ಯವಸ್ಥೆಯಾಗಿದೆ. ಅಮೆಝಾನ್,ಫ್ಲಿಪ್‌ಕಾರ್ಟ್,ವಿ ಕಮಿಷನ್,ಶಾದಿ ಡಾಟ್ ಕಾಮ್‌ನಂತಹ,ತಮ್ಮ ಉತ್ಪನ್ನಗಳನ್ನು ಉತ್ತೇಜಿಸಲು ನಿಮಗೆ ಹಣ ಪಾವತಿಸುವ ಹಲವಾರು ಪ್ರತಿಷ್ಠಿತ ಕಂಪನಿಗಳಿವೆ. ಈ ಕಂಪನಿಗಳ ಅಫಿಲಿಯೇಟ್ ಮಾರ್ಕೆಂಟಿಂಗ್ ಕಾರ್ಯಕ್ರಮಗಳಿಗೆ ಸೇರಿಕೊಂಡು ಅವರ ಕಂಟೆಂಟ್‌ಗಳನ್ನು ನಿಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಪೋಸ್ಟ ಮಾಡುವುದಷ್ಟೇ ನಿಮ್ಮ ಕೆೆಲಸ. ಪ್ರತಿಬಾರಿಯೂ ಆಸಕ್ತ ವ್ಯಕ್ತಿಗಳು ನೀವು ಪೋಸ್ಟ್ ಮಾಡಿರುವ ಜಾಹೀರಾತು ಅಥವಾ ಕಂಟೆಂಟ್‌ನ್ನು ನೋಡಿ ಅದನ್ನು ಕ್ಲಿಕ್ಕಿಸಿ ಆ ಕಂಪನಿಯ ಗ್ರಾಹಕರಾದಾಗ ನಿಮಗೆ ಆದಾಯ ದೊರೆಯುತ್ತದೆ.

►ಫೇಸ್‌ಬುಕ್ ಮಾರುಕಟ್ಟೆ

 ನೀವು ಯಾವುದಾದರೂ ಉತ್ಪನ್ನ ಅಥವಾ ಸೇವೆಯನ್ನು ಮಾರಾಟ ಮಾಡುತ್ತಿದ್ದರೆ ಅದಕ್ಕಾಗಿ ಫೇಸ್‌ಬುಕ್ ಮಾರ್ಕೆಟ ಪ್ಲೇಸ್ ನಿಮಗೆ ಉಚಿತವಾಗಿ ದೊರೆಯುವ ಸೌಲಭ್ಯವಾಗಿದೆ. ಇದರ ಮೂಲಕ ನೀವು ಹೆಚ್ಚಿನ ಜನರನ್ನು ತಲುಪಬಹುದು. ಫೇಸ್‌ಬುಕ್ ಮಾರ್ಕೆಟ್ ಪ್ಲೇಸ್ ನಿಮ್ಮ ವಿವಿಧ ಉತ್ಪನ್ನಗಳು, ಸೇವೆಗಳು, ವ್ಯವಹಾರಗಳನ್ನ್ನು ಪಟ್ಟಿ ಮಾಡಲು ಮತ್ತು ಅವುಗಳನ್ನು ಫೇಸಬುಕ್ ಸಮುದಾಯದಲ್ಲಿ ನೇರವಾಗಿ ಉತ್ತೇಜಿಸಲು ಅವಕಾಶ ಕಲ್ಪಿಸುತ್ತದೆ ಮತ್ತು ನೀವು ನಿಮ್ಮದೇ ಆದ ಸೋಷಿಯಲ್ ನೆಟ್‌ವರ್ಕ್ ಮೂಲಕ ಸಾವಿರಾರು ಜನರನ್ನು ತಲುಪುವ ಜೊತೆಗೆ ನೀವು ಏನನ್ನು ಮಾರಾಟ ಮಾಡುತ್ತಿದ್ದೀರಿ ಎನ್ನುವುದನ್ನು ನೋಟಿಫೈ ಮಾಡಲು ನಿಮ್ಮ ಫೇಸ್‌ಬುಕ್ ಸ್ನೇಹಿತರಿಗೆ ಅವಕಾಶವನ್ನು ಒದಗಿಸುತ್ತದೆ. ಕ್ಲಾಸಿಫೈಡ್ ಜಾಹೀರಾತುಗಳಂತೆ ಖರೀದಿದಾರರು ನಿಮ್ಮನ್ನು ಸಂಪರ್ಕಿಸಿ ವಸ್ತುಗಳನ್ನು ಪರಿಶೀಲಿಸಿ ಖರಿದಿಸುತ್ತಾರೆ.

►ಫೇಸ್‌ಬುಕ್ ಪ್ರಾಯೋಜಿತ ಪೋಸ್ಟ್‌ಗಳು

  ನೀವು ಫೇಸ್‌ಬುಕ್ ಬಳಕೆದಾರರಾಗಿದ್ದರೆ ಮತ್ತು ಬಹಳಷ್ಟು ಫಾಲೋವರ್‌ಗಳನ್ನು ಹೊಂದಿದ್ದರೆ ಹಣ ಮಾಡಲು ಫೇಸ್‌ಬುಕ್ ಪ್ರಾಯೋಜಿತ ಪೋಸ್ಟ್‌ಗಳು ಉತ್ತಮ ಸಾಧನಗಳಾಗಿವೆ. ಕಂಪನಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳ ಮಾರಾಟಕ್ಕಾಗಿ ಸದಾ ಪ್ರಭಾವಿಗಳ ಮೇಲೆ ಕಣ್ಣಿಟ್ಟಿರುತ್ತವೆ. ಹೀಗಾಗಿ ಅಧಿಕ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಹೊಂದಿರುವ ಬಳಕೆದಾರರಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಇಂತಹ ಬಳಕೆದಾರರು ತಮ್ಮ ಫೇಸ್‌ಬುಕ್ ಪುಟದಲ್ಲಿ ಫೇಸ್‌ಬುಕ್ ಪ್ರಾಯೋಜಿತ ಪೋಸ್ಟ್‌ಗಳನ್ನು ಎನೇಬಲ್ ಮಾಡಿದರೆ ಕಂಪನಿಯು ಪ್ರತಿಬಾರಿಯೂ ತನ್ನ ಕಂಟೆಂಟ್‌ನ್ನು ಅವರ ಪುಟದಲ್ಲಿ ಪ್ರಾಯೋಜಿತ ಪೋಸ್ಟ್ ಮಾಡಿದರೆ ಬಳಕೆದಾರರಿಗೆ ಜಾಹೀರಾತು ಆದಾಯದ ಒಂದು ಪಾಲು ದೊರೆಯುತ್ತದೆ. ತನ್ನ ಫಾಲೋವರ್ ಗಳ ಸಂಖ್ಯೆಯನ್ನು ವಿಸ್ತರಿಸಿಕೊಳ್ಳುವುದು ಮತ್ತು ಅವರು ಕಂಟೆಂಟ್‌ನಲ್ಲಿ ಆಸಕ್ತರಾಗಿರುವಂತೆ ನೋಡಿಕೊಳ್ಳುವುದು ಮಾತ್ರ ಬಳಕೆದಾರರು ಮಾಡಬೇಕಾದ ಪ್ರಯತ್ನವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News