ಆಲ್ವಾರ್ ಗುಂಪು ಹತ್ಯೆ ಪ್ರಕರಣದ ವಿಚಾರಣೆ:ರಾಜಸ್ಥಾನದಿಂದ ಸ್ಥಳಾಂತರಿಸಲು ಸುಪ್ರೀಂ ಸಮ್ಮತಿ

Update: 2018-09-10 15:06 GMT

ಹೊಸದಿಲ್ಲಿ, ಸೆ.10: ಆಲ್ವಾರ್‌ನಲ್ಲಿ ನಡೆದಿದ್ದ ಗುಂಪುಹತ್ಯೆ ಪ್ರಕರಣದ ವಿಚಾರಣೆಯನ್ನುರಾಜಸ್ಥಾನದಿಂದ ಹೊರಗೆ ನಡೆಸಬೇಕೆಂದು ಸಂತ್ರಸ್ತ ವ್ಯಕ್ತಿಯ ತಂದೆ ಸಲ್ಲಿಸಿದ್ದ ಮನವಿಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಪ್ರಕರಣದ ತನಿಖೆಯನ್ನುರಾಜಸ್ಥಾನದ ಹೊರಗಡೆ ನಡೆಸಬೇಕೆಂದು ಸಂತ್ರಸ್ತ ಅಕ್ಬರ್ ಖಾನ್ ತಂದೆ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಆಲ್ವಾರ್ ಕ್ಷೇತ್ರದ ಬಿಜೆಪಿ ಶಾಸಕ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಮಧ್ಯೆ, ಅಕ್ಬರ್‌ಖಾನ್ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಮೂವರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಬರ್ ಸಾವು ಗುಂಪು ಹತ್ಯೆಯಿಂದ ಆಗಿಲ್ಲ. ಜುಲೈ 20ರಂದು ನಡೆದ ದಾಳಿ ಘಟನೆಗೆ ನಾಲ್ವರು ವ್ಯಕ್ತಿಗಳು ಹೊಣೆಯಾಗಿದ್ದಾರೆ ಎಂದು 25 ಪುಟಗಳ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಒಬ್ಬ ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News