ಟಿವಿ ನೇರ ಪ್ರಸಾರ ಕಾರ್ಯಕ್ರಮದ ಮಧ್ಯೆ ಕುಸಿದು ಮೃತಪಟ್ಟ ಲೇಖಕಿ

Update: 2018-09-10 17:29 GMT

ಶ್ರೀನಗರ, ಸೆ.10: ಖ್ಯಾತ ಲೇಖಕಿ ಹಾಗೂ ಶಿಕ್ಷಣತಜ್ಞೆಯೊಬ್ಬರು ಟಿವಿಯಲ್ಲಿ ನಡೆಯುತ್ತಿದ್ದ ನೇರಪ್ರಸಾರ ಕಾರ್ಯಕ್ರಮದ ಮಧ್ಯೆಯೇ ಕುಸಿದುಬಿದ್ದು ಮೃತಪಟ್ಟ ಘಟನೆ ಸೋಮವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಜನಪ್ರಿಯರಾಗಿರುವ 86ರ ಹರೆಯದ ರಿತಾ ಜತಿಂದರ್ ಸೋಮವಾರ ಪ್ರಾದೇಶಿಕ ದೂರದರ್ಶನ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಗುಡ್ ಮಾರ್ನಿಂಗ್ ಜೆಆ್ಯಂಡ್‌ಕೆ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಆಕೆ ತನ್ನ ಜೀವನ ಮತ್ತು ಸಾಧನೆಗಳ ಬಗ್ಗೆ ಮಾತನಾಡುತ್ತಿದ್ದರು. ಘಟನೆ ನಡೆದ ಸಂದರ್ಭ ಆಕೆ ಸದ್ಯ ಅನಾರೋಗ್ಯಪೀಡಿತರಾಗಿರುವ ನಟ ದಿಲೀಪ್ ಕುಮಾರ್ ಅವರನ್ನು ನಕಲು ಮಾಡುತ್ತಿದ್ದರು. ಹಾಗಾಗಿ ಅವರು ಕುಸಿದು ಬೀಳುವಾಗಲೂ ನಾವೆಲ್ಲರೂ ಆಕೆ ನಟನೆ ಮಾಡುತ್ತಿದ್ದಾರೆ ಎಂದೇ ಭಾವಿಸಿದ್ದೆವು. ಪರಿಸ್ಥಿತಿಯ ವಾಸ್ತವಾಂಶ ತಿಳಿಯಲು ನಮಗೆ ಕೆಲವು ಕ್ಷಣಗಳು ಬೇಕಾಯಿತು ಎಂದು ಕಾರ್ಯಕ್ರಮದ ನಿರೂಪಕ ಝಹಿದ್ ಮುಕ್ತಾರ್ ತಿಳಿಸಿದ್ದಾರೆ. ಜತಿಂದರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ಅಲ್ಲಿನ ವೈದ್ಯರು ಆಕೆಯನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಮುಕ್ತಾರ್ ತಿಳಿಸಿದ್ದಾರೆ. ಜತಿಂದರ್, ಜಮ್ಮು ಮತ್ತು ಕಾಶ್ಮೀರ ಸರಕಾರದಲ್ಲಿ ಕಲೆ, ಸಂಸ್ಕೃತಿ ಮತ್ತು ಭಾಷೆಗಳ ಅಕಾಡೆಮಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News