ವೇದ ಕಾಲದ ವಿಮಾನ ಸಿದ್ಧಾಂತ ಹಸಿ ಸುಳ್ಳು: ಮುಂಬೈ ತಜ್ಞರು

Update: 2018-09-11 18:25 GMT

ಮುಂಬೈ, ಸೆ. 11: ವೇದ ಕಾಲದ ವಿಮಾನ ತಂತ್ರಜ್ಞಾನ ಸಿದ್ಧಾಂತದ ಬಗ್ಗೆ ಸಂಘಟನೆಯೊಂದು ಇಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಪಾಲ್ಗೊಂಡ ತಜ್ಞರು ವಿವಿಧ ಪ್ರಶ್ನೆಗಳನ್ನು ಎತ್ತುವ ಮೂಲಕ ಅದನ್ನು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.

 ಭಾರತದ ವೈಮಾನಿಕ ಸಾಮರ್ಥ್ಯಕ್ಕೆ ಹಿಂದೂ ಪುರಾಣಗಳಲ್ಲಿನ ಕೆಲವು ಘಟನೆಗಳು ಪೂರಕವಾಗಿ ಇವೆ ಎಂದು ಹೇಳಿಕೊಂಡಿರುವ ವ್ಯಾಟ್ಸ್ ಆ್ಯಪ್ ಸಂದೇಶವೊಂದನ್ನು ನಗರದ ಪ್ರತಿಷ್ಠಿತ ಸಂಸ್ಥೆಯೊಂದರ ತಜ್ಞರ ಗುಂಪು ಸ್ವೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ತಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.‘ಭಾರತಮ್ ರಿಎವೇಕನಿಂಗ್’ ಹೆಸರಿನಲ್ಲಿ ಗುಂಪು ದಾದರ್ ಶಾಲೆಯಲ್ಲಿ ಆಯೋಜಿಸಿದ್ದ ವಿಮಾನ ಶಾಸ್ತ್ರ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು ಕೂಡ ಇದ್ದರು. ಅವರಲ್ಲಿ ಡಿಫೆನ್ಸ್ ಇನ್‌ಸ್ಟಿಟಿಟ್ಯೂಟ್ ಆಫ್ ಅಡ್ವಾನ್ಸಡ್ ಟೆಕ್ನಾಲಜಿ (ಡಿಐಎಟಿ)ಯ ಮಾಜಿ ಉಪ ಕುಲಪತಿ ಹಾಗೂ ಡಿಆರ್‌ಡಿಒದ ಮಾಜಿ ಮುಖ್ಯ ನಿಯಂತ್ರಣಾಧಿಕಾರಿ ಡಾ. ಪ್ರಹ್ಲಾದ್ ರಾಮರಾವ್, ವಿಮಾನ ಎಂಜಿನಿಯರ್ ಕಾವ್ಯಾ ವಡ್ಡಾಡಿ ಹಾಗೂ ಇತರ ಕೆಲವು ವಿಜ್ಞಾನಿಗಳು ಪಾಲ್ಗೊಂಡಿದ್ದರು. ಪ್ರೇಕ್ಷಕರು ಮಾತ್ರವಲ್ಲ ಕೆಲವು ವಿಜ್ಞಾನಿಗಳೂಕೂಡ ಮೂಡನಂಬಿಕೆಗಳು ಒಳಗಾಗಿರುವುದು ತಜ್ಞರಿಗೆ ಆಘಾತ ಉಂಟು ಮಾಡಿದೆ.

ಪ್ರಾಚೀನ ಕಾಲದಲ್ಲಿ ವಿಮಾನಗಳಿಗೆ ಕತ್ತೆಯ ಮೂತ್ರ ಹಾಗೂ ಪಾದರಸವನ್ನು ಇಂಧನವಾಗಿ ಬಳಸಲಾಗುತ್ತಿತ್ತು ಎಂದು ವಿಜ್ಞಾನಿಗಳು ಹೇಳಿರುವುದು ತಜ್ಞರಿಗೆ ಇನ್ನಷ್ಟು ಆಘಾತ ಉಂಟು ಮಾಡಿದೆ. ನಗರದ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಾದ ಅನಿಕೇತ್ ಸುಲೆ, ಡಾ. ರೋಹಿಣಿ ಕಂರಂದಿಕರ್ ದಾಂಗೆ, ಸತಾಕ್ಷಿ ಗೋಯಲ್ ಮೊದಲಾದವರು ಪಾಲ್ಗೊಂಡು ‘ವಿಮಾನ ಸಿದ್ದಾಂತ’ದ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಭಾಷಣಕಾರರು ಸಮರ್ಪಕವಾದ ಉತ್ತರ ನೀಡುವಲ್ಲಿ ವಿಫಲರಾದರು. ಈ ಸಂದರ್ಭ ಕೆರಳಿದ ಪ್ರೇಕ್ಷಕರನ್ನು ವಿಜ್ಞಾನಿಗಳನ್ನು ಹೊರಗೆ ಕಳುಹಿಸುವಂತೆ ಆಗ್ರಹಿಸಿದರು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News