ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2018-09-11 18:32 GMT

ಗಾಲೆ, ಸೆ.11: ಸ್ಮತಿ ಮಂಧಾನ ಆಕರ್ಷಕ ಅರ್ಧಶತಕ(ಔಟಾಗದೆ 73 ರನ್,76 ಎಸೆತ) ಹಾಗೂ ಬೌಲರ್‌ಗಳ ಸಾಂಘಿಕ ಪ್ರದರ್ಶನ ನೆರವಿನಿಂದ ಶ್ರೀಲಂಕಾ ವಿರುದ್ಧ ಮಂಗಳವಾರ ಇಲ್ಲಿ ನಡೆದ ಐಸಿಸಿ ಮಹಿಳಾ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ತಂಡವನ್ನು ಮನ್ಸಿ ಜೋಶಿ(3-16), ಪೂನಂ ಯಾದವ್(2-13) ಹಾಗೂ ಜುಲನ್ ಗೋಸ್ವಾಮಿ(2-13) 35.1 ಓವರ್‌ಗಳಲ್ಲಿ ಕೇವಲ 98 ರನ್‌ಗೆ ಆಲೌಟ್ ಮಾಡಿದರು. ಪೂನಂ ಯಾದವ್ ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು.

ಲಂಕೆಯ ಪರ ನಾಯಕಿ ಜಯಾಂಗನಿ(33) ಅಗ್ರ ಸ್ಕೋರರ್ ಎನಿಸಿಕೊಂಡರು. ಶ್ರೀಪಾಲಿ ವೀರಕ್ಕೋಡಿ 26 ರನ್ ಗಳಿಸಿದರು.

 19.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿದ ಭಾರತದ ಪರ ಮಂಧಾನ 76 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಿತ ಔಟಾಗದೆ 73 ರನ್ ಸಿಡಿಸಿದರು. ಕಳೆದ 6 ಪಂದ್ಯಗಳಲ್ಲಿ 5ನೇ ಬಾರಿ ಅರ್ಧಶತಕ ಪೂರೈಸಿದರು. ಪೂನಂ ರಾವತ್ 24 ರನ್ ಗಳಿಸಿ ಔಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News