ಕ್ರೈಸ್ತ ಸನ್ಯಾಸಿನಿಯನ್ನು ವೇಶ್ಯೆ ಎಂದು ಕರೆದದ್ದು ತಪ್ಪು, ಆದರೆ ಕ್ಷಮೆ ಯಾಚಿಸುವುದಿಲ್ಲ: ಕೇರಳ ಶಾಸಕ

Update: 2018-09-12 14:49 GMT

ತಿರುವನಂತಪುರಂ, ಸೆ.12: ಬಿಷಪ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ನೀಡಿರುವ ಕೇರಳದ ಕ್ರೈಸ್ತ ಸನ್ಯಾಸಿನಿಯನ್ನು ವೇಶ್ಯೆ ಎಂದು ಹೀಯಾಳಿಸಿದ್ದ ಕೇರಳದ ಪಕ್ಷೇತರ ಶಾಸಕ ಪಿ.ಸಿ.ಜಾರ್ಜ್, ತಾನು ಹಾಗೆ ಹೇಳಬಾರದಿತ್ತು ಎಂದು ಬುಧವಾರ ಹೇಳಿಕೆ ನೀಡಿದ್ದಾರೆ.

ಯಾವುದೇ ಮಹಿಳೆಯನ್ನು ವೇಶ್ಯೆ ಎಂದು ಕರೆಯಬಾರದು. ಹೀಗೆ ಮಾಡುವುದು ಸರಿಯಾದ ಕ್ರಮವಲ್ಲ ಎಂದ ಜಾರ್ಜ್, ಆದರೆ ತನ್ನ ವಿವಾದಾಸ್ಪದ ಹೇಳಿಕೆಯ ಹಿನ್ನೆಲೆಯಲ್ಲಿ ತಾನು ಯಾರಲ್ಲಿಯೂ ಕ್ಷಮೆ ಯಾಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ, ಕ್ರೈಸ್ತ ಸನ್ಯಾಸಿನಿಯ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಶಾಸಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು ‘ಬಾಯಿ ಮುಚ್ಚಿಕೊಳ್ಳಿ’ ಎಂಬ ಅಭಿಯಾನ ಆರಂಭಿಸಲಾಗಿದೆ. ಜೊತೆಗೆ ಬಾಯಿಗೆ ಅಂಟಿಸಿಕೊಳ್ಳುವಂತೆ ತಿಳಿಸಿ ಗಮ್‌ಟೇಪ್‌ಗಳನ್ನು ಶಾಸಕ ಜಾರ್ಜ್‌ಗೆ ಕೊರಿಯರ್ ಮೂಲಕ ರವಾನಿಸಲಾಗಿದೆ. ಅಶ್ಲೀಲವಾಗಿ ಹೇಳಿಕೆ ನೀಡಿರುವ ಜಾರ್ಜ್‌ರನ್ನು ರಾಷ್ಟ್ರೀಯ ಮಹಿಳಾ ಆಯೋಗ ಕಟುವಾಗಿ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News