ದಲಿತ, ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಬಿಜೆಪಿ ನಾಯಕರಿಂದ ಪ್ರಚೋದನೆ: ವಿಶ್ವಸಂಸ್ಥೆ ಮಾನವಹಕ್ಕು ಮಂಡಳಿ ವರದಿ

Update: 2018-09-13 08:09 GMT

ಹೊಸದಿಲ್ಲಿ, ಸೆ.13: ಬಿಜೆಪಿ ನಾಯಕರು ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ಮುಸ್ಲಿಮರು ಹಾಗೂ ಪರಿಶಿಷ್ಟರನ್ನು ಗುರಿಯಾಗಿಸಿ ಕಾನೂನನ್ನು ಕೈಗೆತ್ತಿಕೊಳ್ಳಲು ಉತ್ತೇಜಿಸಿದ್ದಾರೆಂದು ವಿಶ್ವಸಂಸ್ಥೆಗೆ ಸಲ್ಲಿಸಲಾದ ವರದಿಯೊಂದು ತಿಳಿಸಿದೆ.

ಈ ವರದಿಯನ್ನು ವಿಶ್ವಸಂಸ್ಥೆಗಾಗಿ ಅಸಹಿಷ್ಣುತೆಗೆ ಹಾಗೂ ಸಂಬಂಧಿಸಿದ ಘಟನಾವಳಿಗಳ ಬಗ್ಗೆ ಟೆಂಡಯಿ ಅಚಿಯುಮೆ ಎಂಬವರು ಸಿದ್ಧಪಡಿಸಿದ್ದು, ಈ ಹುದ್ದೆಗೆ ನೇಮಕಾತಿಯನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ನೇಮಿಸಿದ ಸ್ವತಂತ್ರ ಮಾನವ ಹಕ್ಕು  ತಜ್ಞರೊಬ್ಬರು  ಮಾಡಿರುತ್ತಾರೆ.

ಭಾರತದಲ್ಲಿ  ಬಿಜೆಪಿ  ವಿಜಯ ಸಾಧಿಸಿದ ನಂತರ ದಲಿತರು, ಮುಸ್ಲಿಮರು, ಆದಿವಾಸಿಗಳು ಹಾಗೂ ಕ್ರೈಸ್ತ ಸಮುದಾಯಗಳ ಮೇಲಿನ ಹಿಂಸೆಗಳು ಹೆಚ್ಚಾಗಿವೆ ಎಂದು ವರದಿ ಹೇಳಿದೆ. ವರದಿಯು ಅಸ್ಸಾಂ ರಾಜ್ಯದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಬಗ್ಗೆಯೂ ತನ್ನ ಸಂಶಯಗಳನ್ನು ವ್ಯಕ್ತಪಡಿಸಿದೆ. ಈ ಪಟ್ಟಿಯನ್ನು ಪರಿಷ್ಕರಿಸುವ ಹೊಣೆ ಹೊತ್ತ ಸ್ಥಳೀಯ ಪ್ರಾಧಿಕಾರಗಳ ನಡೆಯನ್ನೂ ವರದಿ ಪ್ರಶ್ನಿಸಿದೆಯಲ್ಲದೆ ಅವರು ಮುಸ್ಲಿಮರು ಹಾಗೂ ಬಂಗಾಳಿ ಮೂಲದ ಜನರ ಬಗ್ಗೆ ಆಕ್ಷೇಪಾರ್ಹ ಧೋರಣೆ ಹೊಂದಿದ್ದಾರೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News