×
Ad

'ಕೌನ್ ಬನೇಗಾ ಕರೋಡ್ ಪತಿ' ಶೈಲಿಯ ಪ್ರಶ್ನೆ ಕೇಳಿ ಬಿಜೆಪಿಯನ್ನು ಕುಟುಕಿದ ಕಾಂಗ್ರೆಸ್‍

Update: 2018-09-13 21:38 IST

ಹೊಸದಿಲ್ಲಿ, ಸೆ.13: ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ- ಉದ್ಯಮಿ ವಿಜಯ್ ಮಲ್ಯ ಭೇಟಿಯ ಬಗ್ಗೆ ‘ಕೌನ್ ಬನೇಗಾ ಕರೋಡ್ ಪತಿ ಶೈಲಿಯ ಪ್ರಶ್ನೆ ಕೇಳಿ ಕಾಂಗ್ರೆಸ್ ಕೇಸರಿ ಪಕ್ಷವನ್ನು ಕುಟುಕಿದೆ.

ಬುಧವಾರ ಕಾಂಗ್ರೆಸ್ ಪಕ್ಷ, ಅಮಿತಾಭ್ ಬಚ್ಚನ್ ಅವರ ಜನಪ್ರಿಯ ರಸಪ್ರಶ್ನೆ ಶೋ "ಕೌನ್ ಬನೇಗಾ ಕರೋಡ್ ಪತಿ"ಯ ಸ್ಕ್ರೀನ್‍ಶಾಟ್ ಟ್ವೀಟ್ ಮಾಡಿದೆ. ಇದರಲ್ಲಿ ಪ್ರಶ್ನೆಯನ್ನು ತಿದ್ದಿ, "ವಿಜಯ್ ಮಲ್ಯ ಭಾರತದಿಂದ ತಪ್ಪಿಸಿಕೊಳ್ಳಲು ನೆರವಾದವರು ಯಾರು?" ಎಂದು ಪ್ರಶ್ನೆ ಎಸೆಯಲಾಗಿದೆ. ಇದಕ್ಕೆ ಎ). ಅರುಣ್, ಬಿ)ಜೇಟ್ಲಿ, ಸಿ)ಅರುಣ್ ಜೇಟ್ಲಿ ಹಾಗೂ ಡಿ)ಹಣಕಾಸು ಸಚಿವರು! ಎಂಬ ನಾಲ್ಕು ಆಯ್ಕೆಗಳನ್ನೂ ನೀಡಲಾಗಿದೆ.

ಭಾರತ ತೊರೆಯುವುದಕ್ಕೂ ಮೊದಲು ತಾನು ಹಣಕಾಸು ಸಚಿವರನ್ನು ಭೇಟಿಯಾಗಿದ್ದೆ ಎಂಬ ವಿಜಯ್ ಮಲ್ಯ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ ಪಾಲಿಗೆ ಇದು ಬಿಜೆಪಿ ವಿರುದ್ಧದ ಬಹುದೊಡ್ಡ ಅಸ್ತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News