ಎಚ್ಎಎಲ್ ಅಸಾಮರ್ಥ್ಯ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ರದ್ದಾಗಲು ಕಾರಣ: ನಿರ್ಮಲಾ ಸೀತಾರಾಮನ್

Update: 2018-09-13 17:52 GMT

ಹೊಸದಿಲ್ಲಿ, ಸೆ.13: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಯುದ್ಧ ವಿಮಾನ ನಿರ್ಮಿಸಲು ಅಗತ್ಯ ಸಾಮರ್ಥ್ಯ ಹೊಂದಿಲ್ಲದ ಕಾರಣದಿಂದಾಗಿ ಯುಪಿಎ ಸರಕಾರದ ಅವಧಿಯಲ್ಲಿ  126 ರಾಫೆಲ್ ಯುದ್ಧ ವಿಮಾನ ಖರೀದಿಯ ಒಪ್ಪಂದ ಮುರಿದುಬಿದ್ದಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು
    “ವೆಚ್ಚ ಸಮಾಲೋಚನಾ ಸಮಿತಿಯು ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಅಂತಿಮ ರೂಪ ನೀಡುತ್ತಿರುವಾಗ ಅಂದಿನ ರಕ್ಷಣಾ ಸಚಿವರಾಗಿ ಎ. ಕೆ. ಆ್ಯಂಟನಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಿರುವುದು  ಎಚ್ ಎಎಲ್ ಜೊತೆಗಿನ ಒಪ್ಪಂದ ಮುರಿದು ಬೀಳಲು ಕಾರಣವಾಗಿದೆ  ಎಂದು ಪಿಟಿಐ ಸಂಪಾದಕರು ಮತ್ತು ವರದಿಗಾರರೊಂದಿಗೆ ಗುರುವಾರ ನಡೆದ ಸಂವಾದದಲ್ಲಿ ಸೀತಾರಾಮನ್ ಆರೋಪಿಸಿದರು.
  ಹಲವು ಸುತ್ತಿನ ಮಾತುಕತೆ ನಡೆದ  ಬಳಿಕ  ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಡಸಾಲ್ಟ್ ಏವಿಯೇಷನ್, ಭಾರತದಲ್ಲಿ ಉತ್ಪಾದಿಸಬೇಕಾದರೆ ರಾಫೆಲ್ ಯುದ್ಧ ವಿಮಾನಗಳ ವೆಚ್ಚ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹೇಳಿತ್ತು ಎಂದು ಸೀತಾರಾಮನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News