ಮನೋಹರ್ ಪಾರಿಕ್ಕರ್ ಮತ್ತೆ ಆಸ್ಪತ್ರೆಗೆ ದಾಖಲು

Update: 2018-09-15 15:49 GMT

ಹೊಸದಿಲ್ಲಿ, ಸೆ. 15: ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರನ್ನು ಶನಿವಾರ ಇಲ್ಲಿನ ಎಐಐಎಂಎಸ್‌ಗೆ ದಾಖಲಿಸಲಾಗಿದೆ. ಪೇಂಕ್ರಿಯಾಸ್ ಕಾಯಿಲೆ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರ ತಂಡ ಅವರ ತಪಾಸಣೆ ನಡೆಸುತ್ತಿದೆ ಎಂದು ಎಐಐಎಂಎಸ್‌ನ ಮೂಲಗಳು ತಿಳಿಸಿವೆ.

ದಿಲ್ಲಿ ಬಿಡುವ ಮೊದಲು ಪಾರಿಕ್ಕಾರ್ ಸ್ಪೀಕರ್ ಪ್ರಮೋದ್ ಸಾವಂತ್ ಹಾಗೂ ಉಪ ಸ್ಪೀಕರ್ ಮೈಕಲ್ ಲೋಬೊ ಅವರೊಂದಿಗೆ ಸಭೆ ನಡೆಸಿದ್ದಾರೆ ಹಾಗೂ ಪ್ರಸ್ತುತ ತಾನು ನೋಡಿಕೊಳ್ಳುತ್ತಿದ್ದ ಕೆಲವು ಖಾತೆಗಳ ಹಂಚಿಕೆ ಕುರಿತು ಮಾತನಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News