90 ರೂ. ಗಡಿ ತಲುಪಿದ ಪೆಟ್ರೋಲ್: ಇಕ್ಕಟ್ಟಿಗೆ ಸಿಲುಕಿದ ದೂರಸಂಪರ್ಕ ಸಂಸ್ಥೆಗಳು

Update: 2018-09-16 14:42 GMT

ಹೊಸದಿಲ್ಲಿ, ಸೆ.16: ರೂಪಾಯಿ ಮೌಲ್ಯ ಕುಸಿತ ಮತ್ತು ಅಂತರ್‌ರಾಷ್ಟ್ರೀಯ ತೈಲಬೆಲೆಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲಿ ರವಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಹೊಸ ದಾಖಲೆಯ ಮಟ್ಟವನ್ನು ತಲುಪಿದೆ. ರವಿವಾರದಂದು ಮುಂಬೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 89.29ರೂ. ತಲುಪಿದರೆ, ಡೀಸೆಲ್ ಬೆಲೆಯಲ್ಲೂ 19 ಪೈಸೆ ಏರಿಕೆಯಾಗಿ 78.26 ರೂ. ಪ್ರತಿ ಲೀಟರ್‌ಗೆ ತಲುಪಿದೆ. ಇದೇ ವೇಳೆ ದಿಲ್ಲಿಯಲ್ಲಿ ಪೆಟ್ರೋಲ್ 81.91 ರೂ./ಲೀಟರ್ ಆಗಿದ್ದರೆ ಡೀಸೆಲ್ 73.72 ರೂ. ಪ್ರತಿ ಲೀಟರ್‌ಗೆ ಏರಿಕೆಯಾಗಿದೆ. ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೂರಸಂಪರ್ಕ ಸಂಸ್ಥೆಗಳಾದ ಭಾರತಿ ಏರ್‌ಟೆಲ್, ವೊಡಫೋನ್ ಇತ್ಯಾದಿಗಳು ಹೆಚ್ಚಿನ ನಷ್ಟವನ್ನು ಅನುಭವಿಸಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೂರಸಂಕರ್ಪ ಸಂಸ್ಥೆಗಳು ಡೀಸೆಲ್‌ನ ಅತೀದೊಡ್ಡ ಖರೀದಿದಾರರಾಗಿದ್ದು, ಬೆಲೆಯೇರಿಕೆಯಿಂದ ವಾರ್ಷಿಕ ಬಳಕೆ ಮಾಡುವ 200 ಕೋಟಿ ಲೀಟರ್ ಡೀಸೆಲ್‌ಗೆ 9,000 ಕೋಟಿ ರೂ. ವೆಚ್ಚ ಮಾಡಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಕರೆಗಳ ದರವನ್ನು ಏರಿಸುವ ಮೂಲಕ ಏರುತ್ತಿರುವ ಡೀಸೆಲ್ ಬೆಲೆಯನ್ನು ಅತ್ತ ಗ್ರಾಹಕರ ಮೇಲೂ ಹೊರಿಸಲಾಗದೆ ಇತ್ತ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚವನ್ನೂ ಭರಿಸಲಾಗದೆ ದೂರಸಂಪರ್ಕ ಇಲಾಖೆಗಳು ಇಕ್ಕಟ್ಟಿನ ಸ್ಥಿತಿಗೆ ತಲುಪಿವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News