ಮನೋಹರ್ ಪಾರಿಕ್ಕರ್‌ಗೆ ಸರಣಿ ವೈದ್ಯಕೀಯ ಪರೀಕ್ಷೆ: ಎಐಐಎಂಎಸ್

Update: 2018-09-16 18:20 GMT

ಹೊಸದಿಲ್ಲಿ, ಸೆ. 15: ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಇಲ್ಲಿನ ಎಐಐಎಂಎಸ್‌ನಲ್ಲಿ ಸರಣಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಇಲ್ಲಿನ ಹಳೆಯ ಖಾಸಗಿ ವಾರ್ಡ್‌ನಲ್ಲಿ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಪ್ರಮೋದ್ ಗರ್ಗ್ ಅವರ ಉಸ್ತುವಾರಿಯಲ್ಲಿ ಪೇಂಕ್ರಿಯಾಸ್‌ಗೆ ಸಂಬಂಧಿಸಿ ಪಾರಿಕ್ಕಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಸ್ತುತ ಅವರು ಸರಣಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 62ರ ಹರೆಯದ ಪಾರಿಕ್ಕಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ದಿಲ್ಲಿಗೆ ಆಗಮಿಸಿದ್ದಾರೆ. ಸೆಪ್ಟಂಬರ್ ಮೊದಲ ವಾರದಲ್ಲಿ ಅವರು ಅಮೆರಿಕದಿಂದ ಭಾರತಕ್ಕೆ ಆಗಮಿಸಿದ್ದರು. ಅನಂತರ ಅವರನ್ನು ಉತ್ತರ ಗೋವಾದ ಕ್ಯಾಂಡೋಲಿನ್‌ನಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಅವರು ಅಮೆರಿಕದಲ್ಲಿ ಮೂರು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News