9,100 ಕೋ.ರೂ. ಮೌಲ್ಯದ ಮಿಲಿಟರಿ ಉಪಕರಣಗಳ ಖರೀದಿಗೆ ಒಪ್ಪಿಗೆ

Update: 2018-09-18 13:32 GMT

ಹೊಸದಿಲ್ಲಿ,ಸೆ.18: 9,100 ಕೋ.ರೂ.ಮೌಲ್ಯದ ಮಿಲಿಟರಿ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಖರೀದಿಗೆ ರಕ್ಷಣಾ ಸಚಿವಾಲಯವು ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ಇಲ್ಲಿ ತಿಳಿಸಿದರು.

ಈ ಖರೀದಿಗಳಲ್ಲಿ ಆಕಾಶ ಕ್ಷಿಪಣಿ ವ್ಯವಸ್ಥೆಗಳ ಎರಡು ರೆಜಿಮೆಂಟ್‌ಗಳೂ ಸೇರಿವೆ ಎಂದರು.

ರಕ್ಷಣಾ ಖರೀದಿ ಮಂಡಳಿಯು ಈ ಖರೀದಿ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಿದೆ. ಜೊತೆಗೆ ಟಿ90 ಟ್ಯಾಂಕ್‌ಗಳಿಗಾಗಿ ನಿರ್ದೇಶಿತ ಶಸ್ತ್ರಾಸ್ತ್ರ ವ್ಯವಸ್ಥೆಗಳ ಪರೀಕ್ಷಾ ಉಪಕರಣದ ವಿನ್ಯಾಸ ಮತ್ತು ಅಭಿವೃದ್ಧಿಗೂ ಹಸಿರು ನಿಶಾನೆ ತೋರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News