ಮುಝಫ್ಫರ್ ಪುರ ಪ್ರಕರಣದಲ್ಲಿ ಹೊಸದಾಗಿ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

Update: 2018-09-18 13:34 GMT

 ಹೊಸದಿಲ್ಲಿ,ಸೆ.18: ಮುಝಫ್ಫರಪುರ ಆಶ್ರಯಧಾಮ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗಾಗಿ ಹೊಸ ತಂಡವೊಂದನ್ನು ರಚಿಸುವಂತೆ ಸಿಬಿಐಗೆ ಸೂಚಿಸಿರುವ ಪಾಟ್ನಾ ಉಚ್ಚ ನ್ಯಾಯಾಲಯದ ಆ.29ರ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಡೆಯಾಜ್ಞೆಯನ್ನು ನೀಡಿದೆ.

ಬೃಜೇಶ ಠಾಕೂರ್ ಎಂಬಾತ ಮುಖ್ಯಸ್ಥನಾಗಿದ್ದ ಅನುದಾನಿತ ಸರಕಾರೇತರ ಸಂಸ್ಥೆಯೊಂದು ನಡೆಸುತ್ತಿದ್ದ ಈ ಆಶ್ರಯಧಾಮದಲ್ಲಿನ 30ಕ್ಕೂ ಅಧಿಕ ಮಹಿಳಾ ನಿವಾಸಿಗಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದುದು ಬೆಳಕಿಗೆ ಬಂದಿತ್ತು.

ಈ ಹಂತದಲ್ಲಿ ಸಿಬಿಐ ತನಿಖಾ ತಂಡವನ್ನು ಬದಲಿಸುವುದರಿಂದ ಹಾಲಿ ನಡೆಯುತ್ತಿರುವ ತನಿಖೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ದೀಪಕ ಗುಪ್ತಾ ಅವರ ಪೀಠವು ಹೇಳಿತು. ಮುಂದಿನ ಆದೇಶದವರೆಗೆ ತನ್ನ ಮುಂದಿರುವ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಅದು ಪಾಟ್ನಾ ಉಚ್ಚ ನ್ಯಾಯಾಲಯಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News