ಐಎಎಫ್‌ನ ತಾರಿಣಿಯಲ್ಲಿ ಪ್ರಪಂಚ ಪರ್ಯಟನೆ ನಡೆಸಿದ ಯುವತಿಗೆ ‘ಟಾಂಝಿಂಗ್ ನೋರ್ಗೆ’ ಪ್ರಶಸ್ತಿ

Update: 2018-09-18 14:34 GMT

ಹೈದರಾಬಾದ್, ಸೆ. 18: ಪ್ರಪಂಚ ಪರ್ಯಟನೆ ನಡೆಸಿದ ಮೊದಲ ಮಹಿಳಾ ನೌಕಾ ತಂಡದಲ್ಲಿ ಪಾಲ್ಗೊಂಡಿದ್ದ ಹೈದರಾಬಾದ್ ಮೂಲದ ನೌಕಾ ಪಡೆಯ ಅಧಿಕಾರಿ ಲೆಫ್ಟಿನೆಂಟ್ ಐಶ್ವರ್ಯ ಬೊಡ್ಡತಿ ಅವರು ಟಾಂಝಿಂಗ್ ನೋರ್ಗೆ ನ್ಯಾಶನಲ್ ಅಡ್ವಂಚರ್ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ನೆಲ, ಸಮುದ್ರ ಹಾಗೂ ಗಾಳಿಯಲ್ಲಿ ನಡೆಸಿದ ಸಾಹಸ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೆ ನೀಡಲಾಗುವ ಪ್ರಶಸ್ತಿ ಇದಾಗಿದೆ. ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಕೊಡ ಮಾಡುವ ಈ ಪ್ರಶಸ್ತಿ ಸಾಹಸಕ್ಕೆ ನೀಡುವ ರಾಷ್ಟ್ರೀಯ ಅತ್ಯುಚ್ಛ ಪ್ರಶಸ್ತಿ. ಸೆಪ್ಟಂಬರ್ 25ರಂದು ಐಶ್ವರ್ಯಾ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟಾಧ್ಯಕ್ಷರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ‘ನಾವಿಕ ಸಾಗರ ಪರಿಕ್ರಮ’ ಯೋಜನೆಯಲ್ಲಿ ಭಾರತೀಯ ನೌಕಾ ಪಡೆಯ ಹಡಗಾದ ಐಎನ್‌ಎಸ್‌ವಿ ತಾರಿಣಿಯಲ್ಲಿ ಸಿಕಂದರಾಬಾದ್ ಮೂಲದ ಐಶ್ವರ್ಯಾ ಅವರು ಇತರ ಆರು ಮಂದಿಯೊಂದಿಗೆ ವಿಶ್ವ ಪರ್ಯಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News